ಬೆಂಗಳೂರು: ಸಾರಿಗೆ ಅಧಿಕಾರಿಗಳ ಸಭೆಯಲ್ಲಿ ಸಂಬಂಧದಲ್ಲಿ ಮಾವನಾದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣಗೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಬಿಎಂಟಿಸಿ ಎಂಡಿ ಪೊನ್ನುರಾಜ್ ಪರ ನಿಂತು ಡಿ.ಸಿ ತಮ್ಮಣ್ಣಗೆ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಪೊನ್ನುರಾಜ್ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಎತ್ತುವರು ಇಲ್ಲ, ಅವರ ಬಗ್ಗೆ ನನಗೆ ವಿಶ್ವಾಸ ಇದೆ. ಪೊನ್ನುರಾಜ್ ಮೇಲೆ ಸುಖಾಸುಮ್ಮನೆ ಆರೋಪ ಮಾಡಬೇಡಿ. ನಿಮ್ಮ ಕೆಲಸ ನೀವು ಮಾಡಿ ಸಾಕು ಎಂದು ಸಿಎಂ ಎಚ್‍ಡಿಕೆ ಹೇಳಿದ್ದಾರೆ ಎನ್ನಲಾಗಿದೆ.ಎಲೆಕ್ಟ್ರಿಕ್ ಬಸ್ ಖರೀದಿಯಲ್ಲಿ ತಮಣ್ಣ ಪುತ್ರನ ಪಾತ್ರದ ಬಗ್ಗೆ ಸಿಎಂಗೆ ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಡಿ.ಸಿ ತಮ್ಮಣ್ಣ ತಮ್ಮ ಮಗನ ಪರ ವಹಿಸಿಕೊಂಡು ಪೊನ್ನುರಾಜ್ ವಿರುದ್ಧ ಅಕ್ರಮ ಆರೋಪ ಮಾಡುತ್ತಿದ್ದರು. ಈ ವೇಳೆ ಸಿಎಂ ಕುಮಾರಸ್ವಾಮಿ ಪೊನ್ನುರಾಜ್ ಪ್ರಾಮಾಣಿಕತೆ ಹೊಗಳಿ ತಮ್ಮಣ್ಣಗೆ ಕ್ಲಾಸ್ ತೆಗೆದುಕೊಂಡಿದ್ದರು ಎಂದು ತಿಳಿದುಬಂದಿದೆ.ಡಿ.ಸಿ ತಮ್ಮಣ್ಣ ಅವರು ಎಚ್‍ಡಿ ದೇವೇಗೌಡರಿಗೆ ಬೀಗರಾಗಬೇಕು. ಆದ್ದರಿಂದ ತಮ್ಮಣ್ಣ ಅವರು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಾವನಾಗುತ್ತಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


