ಬೆಂಗಳೂರು: ಮೊದಲ ಮಗು ಹೆಣ್ಣು, ಆದ್ದರಿಂದ ನನಗೆ ಅರ್ಜೆಂಟಾಗಿ ಗಂಡು ಮಗು ಬೇಕು. ನನ್ನ ವಂಶ ಬೆಳೆಯಬೇಕು. ನಮ್ಮ ಧರ್ಮದಲ್ಲಿ ನಾಲ್ಕೈದು ಮಕ್ಕಳನ್ನ ಹೆರಬೇಕು ಎಂದು ಪತಿ ಬಾಣಂತಿ ಪತ್ನಿಗೆ ಕಿರುಕುಳ ನೀಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.ರಾಜಾನುಕುಂಟೆ ನಿವಾಸಿ ತಯ್ಯಬ್ ಅಹಮದ್ ಖಾನ್ ಬಾಣಂತಿ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಚಿಂತಾಮಣಿಯ ಕೈವಾರದ ತಾಹಸೀನ್ ಖಾನಂ ರಾಜಾನುಕುಂಟೆ ನಿವಾಸಿ ತಯ್ಯಬ್ ಅಹಮದ್ ಖಾನ್ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದಾರೆ. 30 ಲಕ್ಷ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.ಮದುವೆಯ ನಂತರ ತಯ್ಯಬ್ ಅಹಮದ್ ನ ವರದಕ್ಷಿಣೆ ದಾಹ ತೀರಲೇ ಇಲ್ಲ. ನಿತ್ಯ ದುಡ್ಡು ತರುವಂತೆ ಪೀಡಿಸಿ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾನೆ. ಹೆಣ್ಣು ಮಗು ಆದ ಮೇಲಂತೂ ಇದು ಅತಿರೇಕಕ್ಕೆ ಹೋಗಿದೆ. ನನಗೆ ಗಂಡು ಬೇಕು ಎಂದು ಕೇಳಿದ್ದಾನೆ. ಅದಕ್ಕೆ ಅಕ್ಕ ಸ್ವಲ್ಪ ಸಮಯ ಕೊಡಿ ಎಂದು ಹೇಳಿದ್ದಾರೆ. ಆದರೂ ಆತ ಕೇಳದೆ ಮಗು ಬೇಕೇಬೇಕು ಅಂತ ನನ್ನ ಅಕ್ಕನನ್ನ ರೇಪ್ ಮಾಡಿದ್ದಾನೆ ಎಂದು ಅಹಮದ್ ಪತ್ನಿಯ ಸಹೋದರಿ ಆರೋಪಿಸಿದ್ದು, ನನ್ನ ಅಕ್ಕ ಹಾಗೂ ಮಗುವಿಗೆ ರಕ್ಷಣೆ ಕೊಡಿಸಿ ಅಂತ ಕೇಳಿಕೊಳ್ಳುತ್ತಿದ್ದಾರೆ.ಮೊದಲ ಮಗು ಹೆಣ್ಣಾಗಿದೆ ನಮ್ಮ ವಂಶ ಬೆಳೆಯಲ್ಲ. ಹೆರಿಗೆ ಬೇರೆ ಸಿಜೇರಿಯನ್ ಮಾಡಿಸಿಕೊಂಡಿದ್ದೀಯಾ. ಇನ್ನು ಹೆಚ್ಚು ಮಕ್ಕಳನ್ನ ಹೆರುವುದಕ್ಕೆ ಸಾಧ್ಯವಿಲ್ಲ. ನನಗೆ ನೀನು ಬೇಡ ಅಂತ ಅಂದಿದ್ದಾನೆ. ಅಲ್ಲದೇ ಬಾಣಂತಿಯಾಗಿರುವಾಗಲೇ ಮಗು ಬೇಕು ಅಂತ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದಾನೆ. ನನ್ನ ಪತಿಯಿಂದ ನನಗೆ ಮುಕ್ತಿ ಕೊಡಿಸಿ ಅಂತ ನೊಂದ ಪತ್ನಿ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.ನೊಂದ ಪತ್ನಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೂರು ಬಾರಿ ಬೆಸ್ಟ್ ಪ್ರಿನ್ಸಿಪಾಲ್ ಎಂದು ಅವಾರ್ಡ್ ಪಡೆದಿದ್ದು, ಈಗ ಅವರು ಆಯೋಗದ ಮೊರೆ ಹೋಗಿದ್ದಾರೆ. ಸದ್ಯಕ್ಕೆ  ಮಹಿಳಾ ಆಯೋಗ ಹಾಗೂ ಪೊಲೀಸ್ ಇಲಾಖೆಯವರು ಆರೋಪಿ ತಯ್ಯಬ್ ಅಹಮದ್ ನಿಂದ ನ್ಯಾಯ ದೊರಕಿಸಿಕೊಡಬೇಕಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


