ಬೆಂಗಳೂರು: ಕೆಜಿಎಫ್ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಮೈಲೇಜ್ ಪಡೆದುಕೊಂಡ ಚಿತ್ರವಾಗಿದ್ದು ಇದೀಗ ಚಿತ್ರತಂಡ ಮತ್ತೊಂದು ನಟನ ಲುಕ್ ರಿವೀಲ್ ಮಾಡಿದೆ. ಈ ಮೊದಲು ಕೆಜಿಎಫ್ ಸಿನಿಮಾದ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.ಕೆಜಿಎಫ್ ಸಿನಿಮಾ ಈಗಾಗಲೇ ದೇಶಾದ್ಯಂತ ತೆರೆ ಕಾಣಲು ಸಜ್ಜಾಗುತ್ತಿದೆ. ಹೀಗಿರುವ ಕೆಜಿಎಫ್ ಚಿತ್ರತಂಡ ಮತ್ತೊಂದು ಲುಕ್ ಅನ್ನು ರಿವೀಲ್ ಮಾಡಿದ್ದು, ಕನ್ನಡದ ಹಿರಿಯ ನಟ ಹಾಗೂ ನಿರ್ದೇಶಕರಾದ ಬಿ. ಸುರೇಶ್ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಅವರ ಲುಕ್ ಅನ್ನು ರಿವೀಲ್ ಮಾಡಿದೆ.ಕನ್ನಡದ ಹಿರಿಯ ನಟ ಹಾಗೂ ನಿರ್ದೇಶಕರಾದ ಬಿ ಸುರೇಶ್ ಅವರು ರಾಂಕಿಂಗ್ ಸ್ಟಾರ್ ಯಶ್ ಅವರಂತೆ ಕೂಲಿ ಕಾರ್ಮಿಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಪಾತ್ರದಲ್ಲಿ ಅವರ ಹೆಸರೇನು? ಹಾಗೂ ಅವರು ಯಾವ ಸೀನ್ ನಲ್ಲಿ ಪ್ರವೇಶಿಸುತ್ತಾರೆ ಎಂಬ ಮಾಹಿತಿಗಳನ್ನು ಚಿತ್ರತಂಡ ತಿಳಿಸಿಲ್ಲ. ಬಿ. ಸುರೇಶ್ ಅವರ ಈ ಲುಕ್ ನಲ್ಲಿ ಅವರು ಕೈಯಲ್ಲಿ ಕೊಡಲಿ ಹಿಡಿದುಕೊಂಡಿರುವ ದೃಶ್ಯ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲವನ್ನು ಮೂಡಿಸಿದೆ.ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆಯ ದಿನಾಂಕ ಒಂದು ತಿಂಗಳು ಮುಂದಕ್ಕೆ ಹೋಗಿದ್ದು, ನವೆಂಬರ್ 16 ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಡಿಸೆಂಬರ್ 21 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಪತ್ರಿಕಾಗೋಷ್ಠಿ ನಡೆಸಿದ ನಿರ್ದೇಶಕ ಪ್ರಶಾಂತ್ ನೀಲ್, ಡಿಸೆಂಬರ್ ತಿಂಗಳು ಯಶ್ ಅವರಿಗೆ ಲಕ್ಕಿ ತಿಂಗಳಾದ್ದರಿಂದ ಕೆಜಿಎಫ್ ಆ ತಿಂಗಳಿನಲ್ಲಿ ತೆರೆಕಾಣಲು ಸಿದ್ಧವಾಗಿದೆ. ಸಿನಿಮಾ ರಿಲೀಸ್ ಮುಂದೂಡಿಕೆ ಮಾತ್ರವಲ್ಲದೇ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರದ ಟ್ರೇಲರ್ ಬಿಡುಗಡೆಯ ದಿನಾಂಕವನ್ನು ನವೆಂಬರ್ ಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದರು.ಈ ಚಿತ್ರವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಯಶ್ ಜೊತೆ ಶ್ರೀ ನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಐಟಂ ಹಾಡಿಗೆ ಯಶ್ ಜೊತೆ ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಭಾಟಿಯಾ ಅವರು ಹೆಜ್ಜೆ ಹಾಕಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


