ಮೈಸೂರು: ದಸರಾ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಮತ್ತು ಕೆಆರ್ ಎಸ್ ಸೇರಿದಂತೆ ಸುತ್ತಮುತ್ತ ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಮಂಜುಶ್ರೀ ಆದೇಶ ಹೊರಡಿಸಿದ್ದಾರೆ.ಇಂದಿನಿಂದ ಮೈಸೂರಿನ ದಸರಾ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ದರಿಂದ ಇಂದಿನಿಂದಲೇ ರಾತ್ರಿ 11 ಗಂಟೆವರೆಗೆ ಪಾಂಡವಪುರ ತಾಲೂಕಿನ ಕಟ್ಟೇರಿ ಕಡೆಯಿಂದ ಕೆಆರ್‍ಎಸ್ ಮಾರ್ಗವಾಗಿ ಬರುವ ಎಲ್ಲ ಸರಕು ವಾಹನಗಳ ಸಂಚಾರವನ್ನು ನಿರ್ಬಂಧ ಮಾಡಲಾಗಿದೆ.ಈ ವಾಹನಗಳು ಎಲೆಕೆರೆ ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ಕೆ.ಆರ್.ಪೇಟೆ- ಮೈಸೂರು ರಸ್ತೆಯಲ್ಲಿ ಚಲಿಸಿ ಮೈಸೂರು ಕಡೆಗೆ ಅಥವಾ ಬೆಂಗಳೂರು ಕಡೆಗೆ ಏಕಮುಖವಾಗಿ ಸಂಚರಿಸುವಂತೆ ಸೂಚನೆ ನೀಡಿದ್ದಾರೆ.ಅಕ್ಟೋಬರ್ 17 ರಿಂದ 21ರವರೆಗೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆವರಗೆ ಮೈಸೂರು ಕಡೆಯಿಂದ ಬೃಂದಾವನ ಗಾರ್ಡನ್ ವೀಕ್ಷಿಸಲು ಬರುವ ಪ್ರವಾಸಿಗರ ಎಲ್ಲಾ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.ಬೃಂದಾವನ ಗಾರ್ಡನ್ ವೀಕ್ಷಿಸಿದ ನಂತರ ವಾಪಸ್ ಹೊರಡುವಾಗ ಅಣೆಕಟ್ಟೆ ಬಳಿಯಿರುವ ಹೊಸ ಸೇತುವೆಯಿಂದ ಉತ್ತರಕ್ಕೆ ತಿರುಗಿ ನಾರ್ತ್ ಬ್ಯಾಂಕ್ ಕಟ್ಟೇರಿ, ಎಲೆಕೆರೆ ಹ್ಯಾಂಡ್‍ ಪೋಸ್ಟ್ ಮಾರ್ಗವಾಗಿ ಕೆ.ಆರ್.ಪೇಟೆ- ಮೈಸೂರು ರಸ್ತೆಯಲ್ಲಿ ಚಲಿಸಿ ಮೈಸೂರು, ಮಂಡ್ಯ, ಬೆಂಗಳೂರು ಹಾಗೂ ಇತರೆ ಕಡೆಗಳಿಗೆ ಏಕಮುಖವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


