ಕೊಪ್ಪಳ: ಕೂದಲಿನ ಸೌಂದರ್ಯಕ್ಕೆ ಮಾರು ಹೋಗಿ ಬಾಲಕಿ ಹಾಗೂ ಯುವತಿ ಕಣ್ಣಿಗೆ ಕುತ್ತು ತಂದುಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ.ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಹಾಗೂ ಹಣವಾಳ ಗ್ರಾಮದಲ್ಲಿ ಪ್ರತ್ಯೇಕವಾಗಿ ಇಂತಹ ಘಟನೆ ನಡೆದಿದೆ. ಹಣವಾಳ ಗ್ರಾಮದ ಅನಿತಾ, ಜಂಗಮರ ಕಲ್ಗುಡಿ ಗ್ರಾಮದ ಚಾತುರ್ಯ ಕಣ್ಣಿಗೆ ಕುತ್ತು ತಂದುಕೊಂಡವರಾಗಿದ್ದು, ಇದೀಗ ಗಂಗಾವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅನಿತಾ ಹಾಗೂ ಚಾತುರ್ಯನ ಅಮ್ಮಂದಿರು ನಮ್ಮ ಮಕ್ಕಳ ಕೂದಲು ಕಪ್ಪಾಗಿ ಆಗುತ್ತವೆ ಅಲ್ಲದೇ ತಲೆಯಲ್ಲಿ ಹೇನಿನ ಸಮಸ್ಯೆ ಇರಲ್ಲ ಎಂದು ಸೀತಾಫಲ ಹಣ್ಣಿನ ಬೀಜವನ್ನು ಮಿಕ್ಸಿಯಲ್ಲಿ ಹಾಕಿ ಅದನ್ನು ಪೇಸ್ಟ್ ಮಾಡಿ ರಾತ್ರಿ ತಲೆಗೆ ಹಚ್ಚಿದ್ದಾರೆ. ಆದರೆ ಆ ಬೀಜದ ವಿಷಭರಿತ ರಾಸಾಯನಿಕವು ಕಣ್ಣಿನ ಒಳಗೆ ಹೋಗಿ ಕಣ್ಣುಗಳು ಮಂಜು ಮಂಜಾಗಿ ಕಂಡಿವೆ.ಸದ್ಯ ಇದರಿಂದ ಆತಂಕಗೊಂಡ ಪೋಷಕರು ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇಬ್ಬರಿಗೆ ಕಣ್ಣಿನ ಚಿಕಿತ್ಸೆ ಮಾಡಿದ ವೈದ್ಯರು, ಯುವತಿ ಮತ್ತು ಬಾಲಕಿಯನ್ನು ಕಣ್ಣಿನ ದೋಷದಿಂದ ಪಾರು ಮಾಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


