ಯಾದಗಿರಿ: ನೀರು ಸಂಗ್ರಹಿಸಿಟ್ಟಿದ್ದ ಬಕೆಟ್ ನಲ್ಲಿ ಹೆಣ್ಣು ಮಗು ಬಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಘಟನೆ ನಡೆದಿದೆ.ಎರಡು ವರ್ಷದ ನಿಖಿತಾ ಮೃತ ದುರ್ದೈವಿ. ಪೋಷಕರು ಮನೆ ಮುಂದೆ ಬಕೆಟ್ ನಲ್ಲಿ ನೀರು ಸಂಗ್ರಹಿಸಿಟ್ಟಿದ್ದರು. ಈ ವೇಳೆ ನಿಖಿತಾ ಆಟವಾಡುತ್ತಾ ಹೋದಾಗ ನೀರು ತುಂಬಿದ್ದ ಬಕೆಟ್ ನಲ್ಲಿ ಬಿದ್ದಿದ್ದಾಳೆ. ತಕ್ಷಣ ಪೋಷಕರು ತೀವ್ರ ಅಸ್ವಸ್ಥಳಾಗಿದ್ದ ನಿಖಿತಾಳನ್ನು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗಿದ್ದಾರೆ.ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಅಗತ್ಯ ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ. ನಂತರ ಮಗುವನ್ನು ಅಲ್ಲಿಂದ ಶಹಾಪುರಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈ ವೇಳೆ ಮಾರ್ಗ ಮಧ್ಯೆ ನಿಖಿತಾ ಮೃತಪಟ್ಟಿದ್ದಾಳೆ.ಈ ಘಟನೆ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದ್ದು, ಮುದ್ದು ಮಗುವನ್ನು ಕಳೆದುಕೊಂಡ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


