ಬೆಂಗಳೂರು: ಹೆಂಡತಿಯ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಬಾಳಿ ಬದುಕಬೇಕಿದ್ದ ಬೇರೆಯವರ ಮಗುವನ್ನ ಕಿಡ್ನಾಪ್ ಮಾಡಿ ಹತ್ಯೆಗೈದಿರುವ ಘಟನೆ ನಗರದಲ್ಲಿ ನಡೆದಿದೆ.ಎರಡು ವರ್ಷದ ಶ್ಯಾಮವೇಲು ಕೊಲೆಯಾದ ಮಗು. ಮನೆ ಬಳಿ ಆಟವಾಡುತ್ತಿದ್ದ ಶ್ಯಾಮವೇಲುವನ್ನ ಆರೋಪಿ ಆರ್ಮುಗು ಅಪಹರಣ ಮಾಡಿ, ಬಳಿಕ ಮೂಟೆಯಲ್ಲಿ ಮಗುವನ್ನ ಹೊತ್ತುಕೊಂಡು ಹೋಗಿ ನೀರಿನ ಡ್ರಮ್‍ನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಬೆಳ್ಳಂದೂರು ಕೆರೆಗೆ ಎಸೆದು ಬಂದಿದ್ದಾನೆ.ಇತ್ತ ಆಟವಾಡುತ್ತಿದ್ದ ಮಗು ಕಾಣದೆ ಎಲ್ಲ ಕಡೆ ಪೋಷಕರು ಹುಡುಕಾಡಿದ್ದಾರೆ. ಕೊನೆಗೆ ನಾಪತ್ತೆ ಆಗಿರುವ ಬಗ್ಗೆ ತಾಯಿ ಅಭಿರಾಮಿ ಅಶೋಕ್ ನಗರ ಠಾಣೆಯಲ್ಲಿ ದೂರು ದಾಖಸಿದ್ದರು. ಬಳಿಕ ಆರೋಪಿ ಜಾಡು ಹಿಡಿದು ಹೋದ ಪೊಲೀಸರು ಸಿಸಿಟಿವಿ ಸಹಾಯದಿಂದ ಆರ್ಮುಗನನ್ನು ಬಂಧಿಸಿದ್ದಾರೆ ಎಂದು ಕೇಂದ್ರ ವಿಭಾಗ ಡಿಸಿಪಿ ದೇವರಾಜ್ ಹೇಳಿದ್ದಾರೆ.ಆರೋಪಿ ಆರ್ಮುಗನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಆರ್ಮುಗು ನನ್ನ ಪತ್ನಿ ಚೈತ್ರ, ಅಭಿರಾಮಿ ಅವರ ತಮ್ಮನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಆದ್ದರಿಂದ ಅಭಿರಾಮಿ ಮಗುವನ್ನ ಕಿಡ್ನಾಪ್ ಮಾಡಿ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.ಮಗುವನ್ನ ಕೊಲೆ ಮಾಡಿ ಬಂದು ಊಸರವಳ್ಳಿ ಆಟವಾಡುತ್ತಿದ್ದ ಆರೋಪಿಯನ್ನು ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ. ಇತ್ತ ತಮ್ಮನ ಅನೈತಿಕ ಸಂಬಂಧಕ್ಕೆ ಬಂಗಾರದಂತಿದ್ದ ಮಗವನ್ನ ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮಟ್ಟಿತ್ತು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


