ಹಬ್ಬ-ಹರಿದಿನಗಳು ಬಂದಾಗ ಸಾಮಾನ್ಯವಾಗಿ ಎಲ್ಲರೂ ಹೊಸ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಂತೂ ತಮಗೆ ಡ್ರೆಸ್(ಚೂಡಿದಾರನೇ) ಬೇಕುಂತ ಹಠ ಹಿಡಿಯುತ್ತಾರೆ. ಆದ್ರೆ ಕೆಲವರಿಗೆ ಚೂಡಿದಾರ ಹಾಕಿ ಬೇಜರಾಗಿರುತ್ತೆ. ಹೀಗಾಗಿ ಅವರು ಈ ಬಾರಿ ದಸರಾ ಹಬ್ಬಕ್ಕೆ ಸಾರಿ ಉಟ್ಟು ಸ್ವಲ್ಪ ಚೇಂಜಾಗಿ ಸ್ಟೈಲಿಶ್ ಆಗಿ ಕಾಣಬೇಕು ಅಂದುಕೊಳ್ಳುತ್ತಾರೆ. ಅಂತವರು ಈ ಕೆಳಗಿನಂತೆ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.ಸೀರೆಗಳ ಆಯ್ಕೆ ಹೀಗಿದ್ದರೆ ಚೆಂದ:
* ಹಬ್ಬ ಎಂದರೆ ರೇಷ್ಮೆ ಸೀರೆಗಳು ಮೊದಲ ಸ್ಥಾನದಲ್ಲಿರುತ್ತದೆ. ಟ್ರೆಡಿಷನಲ್ ಆಗಿ ಕಾಣಬೇಕಂದರೆ ರೇಷ್ಮೆ ಸೀರೆ ಆಯ್ದುಕೊಳ್ಳಿ.
* ರೇಷ್ಮೆ ಬದಲಿಗೆ ಕಾಟನ್ ಸಿಲ್ಕ್, ರಾ ಸಿಲ್ಕ್ ಸೀರೆ ಸೆಲೆಕ್ಟ್ ಮಾಡಿಕೊಳ್ಳಿ.
* ನಿಮಗೆ ಯಾವುದರಲ್ಲಿ ಹೆಚ್ಚು ಕಂಫರ್ಟ್ ಇರುತ್ತೋ ಅದನ್ನು ಆಯ್ಕೆ ಮಾಡಿ
* ಕ್ಯಾರಿ ಮಾಡಲು ಬಾರದೇ ಇರಿಸು ಮುರಿಸು ಉಂಟಾಗೋ ಅಲಂಕಾರ ಬೇಡ.
* ಇತ್ತೀಚೆಗೆ ಕಲಂಕಾರಿ ಹೆಚ್ಚು ಟ್ರೆಂಡ್ ಆಗಿದೆ. ಅದರಲ್ಲಿ ನಾನಾ ವೆರೈಟಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
* ಕಲಂಕಾರಿ ಬ್ಲೌಸ್ ಜೊತೆಗೆ ರೇಷ್ಮೆ ಸೀರೆ ಉಡುವುದು ಹೊಸ ಟ್ರೆಂಡ್
* ಪ್ರೆಟೆಂಡ್ ಕಲಂಕಾರಿಯ ಬ್ಯಾಕ್ ನೆಕ್ ಡಿಸೈನ್ ಚೆಂದ ಕಾಣುತ್ತೆ.
* ತೆಳ್ಳಗೆ ಉದ್ದನೆಯ ದೇಹ ಇರುವವರು ಅಗಲ ಬಾರ್ಡರ್ ಇರುವಂತಹ ಪ್ರಿಂಟೆಡ್ ಸೀರೆ ಬಳಸಬಹುದು. ಇವರಿಗೆ ಬಹುತೇಕ ಎಲ್ಲ ವಿನ್ಯಾಸಗಳು ಒಪ್ಪುತ್ತವೆ.
* ಸ್ವಲ್ಪ ದಪ್ಪಗೆ, ಕುಳ್ಳಗಿರುವವರು ಸಿಂಪಲ್ ಅಥವಾ ಚಿಕ್ಕ ಬಾರ್ಡರ್ ಇಲ್ಲವೇ ಸರಳ ಬಾರ್ಡರ್ ಲೈನ್ ಸೀರೆ ಉಡಬಹುದು.
* ಮಧ್ಯ ವಯಸ್ಕರು ಆದಷ್ಟು ಪ್ರಿಂಟೆಡ್ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡಿಕೊಂಡರೆ ಚೆಂದ.
* ಶ್ವೇತ ವರ್ಣದವರಿಗೆ ಎಲ್ಲಾ ಗಾಢ ಬಣ್ಣ ಚೆನ್ನಾಗಿ ಕಾಣಿಸುತ್ತದೆ.
* ಉದ್ಯೋಗಸ್ಥರು ಎಲ್ಲ ಕಾಲದಲ್ಲೂ ಬಳಸಬಹುದಾದ, ವಿನ್ಯಾಸ ಇರುವಂತಹ ರೇಷ್ಮೆ ಸೀರೆ, ಲೈಟ್ ವೇಯ್ಟ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ
* ಜೊತೆಗೆ ಅಮ್ಮನ, ಅತ್ತೆಯ ಹಳೆಯ ಸೀರೆಗಳನ್ನು ಕಲಂಕಾರಿ ಬ್ಲೌಸ್‍ಗಳೊಂದಿಗೆ ಒಮ್ಮೆ ಉಟ್ಟು ನೋಡಿ.ಒಟ್ಟಿನಲ್ಲಿ ಈ ಬಾರಿಯ ದಸರಾ ಹಬ್ಬಕ್ಕೆ ನಿಮಗೆ ಕನ್ಫರ್ಟ್ ಹಾಗೂ ಒಪ್ಪುವಂತಹ ಕಲರ್ ಸೀರೆಗಳನ್ನು ಆಯ್ಕೆ ಮಾಡಿಕೊಂಡು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳಿ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvದಸರಾ ಸುದ್ದಿಗಳು:1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ






 Advertisement 




Sign in to your account
Username or Email Address


Password

 Remember Me


