ಕೊಪ್ಪಳ: ಜಿಲ್ಲೆಯ ಮುಚಗೇರ ಓಣಿಯಲ್ಲಿ ಬೆಳ್ಳಂಬೆಳಗ್ಗೆ ಎರಡು ಬೀದಿ ಹೋರಿಗಳು ಪರಸ್ಪರ ಗುದ್ದಾಡಿಕೊಂಡಿದ್ದು, ಅವುಗಳ ಜಗಳ ಬಿಡಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.ಹೋರಿಗಳ ಜಗಳದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಹೋರಿಗಳ ಮೇಲೆ ನೀರು ಎರಚಿದ್ರೂ ಅವುಗಳು ತಮ್ಮ ಗುದ್ದಾಟವನ್ನು ನಿಲ್ಲಿಸಿಲ್ಲ. ಇದರಿಂದ ಗಾಬರಿಗೊಂಡ ಸ್ಥಳೀಯರು ಕೋಲಿನಿಂದ ಬಡಿದಿದ್ದಾರೆ.ನಡು ರಸ್ತೆಯಲ್ಲಿ ಅರ್ಧ ಗಂಟೆಗಳ ಹೋರಿಗಳು ಗುದ್ದಾಟ ನಡೆಸುತ್ತಿದ್ದವು. ಗುದ್ದಾಟದಿಂದ ಅವುಗಳಿಗೆ ಪ್ರಾಣಾಪಾಯ ಆಗಬಾರದು ಅನ್ನೋ ಉದ್ದೇಶದಿಂದ ಕೋಲಿನಿಂದ ಹೊಡೆದು ಸ್ಥಳೀಯರು ಅವುಗಳ ಜಗಳ ಬಿಡಿಸಿದ್ದಾರೆ. ಟಗರು ಕಾಳಗದಂತೆ ಎರಡು ಬೀದಿ ಹೋರಿಗಳು ಗುದ್ದಾಟ ಮಾಡ್ತಿರೋದು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.ನಡು ರಸ್ತೆಯಲ್ಲಿ ನಡೆಯುತ್ತಿದ್ದ ಹೋರಿಗಳ ಫೈಟ್ ಕೆಲ ಕಾಲ ಸ್ಥಳೀಯರಿಗೆ ಮನರಂಜನೆ ನೀಡಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://www.youtube.com/watch?v=rdTjzzK6UqsSign in to your account
Username or Email Address


Password

 Remember Me


