ಗದಗ: ಮಹಿಳೆ ಮೇಲೆ ಯುವಕರು ಅತ್ಯಾಚಾರವೆಸಗಿದ ಘಟನೆ ಸೋಮವಾರ ಸಂಜೆ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಮಂಜುನಾಥ್(21) ಹಾಗೂ ರಂಗೇಶ್(21) ಅತ್ಯಾಚಾರವೆಸಗಿದ ಆರೋಪಿಗಳು. 45 ವರ್ಷದ ಮಹಿಳೆ ಮೇಲೆ 21 ವರ್ಷದ ಇಬ್ಬರು ಯುವಕರಿಂದ ಅತ್ಯಾಚಾರ ನಡೆಸಿದ್ದಾರೆ. ಮಹಿಳೆ ಜಮೀನಿನಲ್ಲಿ ಬಹಿರ್ದೆಸೆಗೆಂದು ಹೋದ ವೇಳೆ ಈ ಘಟನೆ ನಡೆದಿದೆ.ಮಂಜುನಾಥ್ ಹಾಗೂ ರಂಗೇಶ್ ಮಹಿಳೆಯನ್ನು ಜಮೀನಿನಲ್ಲಿ ಹೊತ್ತೊಯ್ದು ಅತ್ಯಾಚಾರ ಮಾಡಿರುವ ಆರೋಪ ಕೇಳಿಬರುತ್ತಿದೆ. ಅಲ್ಲದೇ ಅತ್ಯಾಚಾರವೆಸಗಿ ಕಾಮುಕ ಮಂಜುನಾಥ್ ಹಾಗೂ ರಂಗೇಶ್ ಪರಾರಿಯಾಗಿದ್ದಾರೆ. ಸಂತ್ರಸ್ತ ಮಹಿಳೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಕಾಮುಕರಿಗಾಗಿ ಗದಗ ಜಿಲ್ಲೆ ಶಿರಹಟ್ಟಿ ಪೊಲೀಸರು ಬಲೆ ಬೀಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


