ಬೆಂಗಳೂರು: ಕೇವಲ ಐನೂರು ರೂಪಾಯಿಗಾಗಿ ಕೊಲೆ ಮಾಡಿ ಪರಪ್ಪನ ಅಗ್ರಹಾರ ಸೇರಿದ್ದ ರೌಡಿಶೀಟರ್ ನನ್ನು ಸಹ ಕೈದಿಗಳೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.ಸುಶಾಂತ್ ಅಲಿಯಾಸ್ ಪೈ ಕೊಲೆಯಾದ ರೌಡಿಶೀಟರ್. ಯೋಗೇಶ್ ಮತ್ತು ಅರ್ಜುನ ಇಬ್ಬರು ಸೇರಿ ಸುಶಾಂತ್ ನನ್ನು ಕೊಲೆ ಮಾಡಿದ್ದಾರೆ. ಕೊಲೆಯಾದ ರೌಡಿಶೀಟರ್ ಸುಬ್ರಮಣ್ಯಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಕೊಲೆ ಯತ್ನ, ಸುಲಿಗೆ ಸೇರಿದಂತೆ ಸಾಕಷ್ಟು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನು.ಕೆಲ ದಿನಗಳ ಹಿಂದೆ ಕೇವಲ ಐನೂರು ರೂಪಾಯಿಗಾಗಿ ಸೆಕ್ಯೂರಿಟಿ ಗಾರ್ಡ್ ನ ಕೊಲೆ ಮಾಡಿ ಪರಪ್ಪನ ಅಗ್ರಹಾರ ಸೇರಿದ್ದನು. ಇಷ್ಟಕ್ಕೆ ಸುಮ್ಮನಾಗದ ಈತ ಸಹಕೈದಿಳಾಗಿದ್ದ ಅರ್ಜುನ್ ಅಲಿಯಾಸ್ ಗಿಡ್ಡ, ಯೋಗಿಶ್ ಅಲಿಯಾಸ್ ಅಭಿಗೆ ಹಲ್ಲೆ ನಡೆಸಿ, ಕಿರುಕುಳ ನೀಡಿದ್ದನು ಎಂದು ಪೊಲೀಸರು ಹೇಳಿದ್ದಾರೆ.ರೌಡಿಶೀಟರ್ ಸುಶಾಂತ್ ಮತ್ತು ಅರ್ಜುನ್ ಅಲಿಯಾಸ್ ಗಿಡ್ಡ, ಯೋಗೀಶ್ ಅಲಿಯಾಸ್ ಅಭಿ ಕೆಲ ದಿನಗಳ ನಂತರ ಜೈಲಿನಿಂದ ಹೊರಬಂದಿದ್ದರು. ಆದರೆ 2 ವಾರಗಳ ಹಿಂದೆ ಸುಬ್ರಮಣ್ಯಪುರದ ಬಾರಿನಲ್ಲಿ ಅರ್ಜುನ್ ಮತ್ತು ಯೊಗೇಶ್ ಕೂತು ಎಣ್ಣೆ ಹೊಡೆಯುತ್ತಿದ್ದರು. ಈ ವೇಳೆ ಇದೇ ಬಾರಿಗೆ ರೌಡಿಶೀಟರ್ ಸುಶಾಂತ್ ಕೂಡ ಬಂದಿದ್ದನು.ಗುರು ನಮಸ್ಕಾರ ಅಂತ ಪರಿಚಯ ಮಾಡಿಕೊಂಡು ಯೊಗೇಶ್ ಮತ್ತು ಅರ್ಜುನ್ ತಮ್ಮದೇ ಕಾಸಲ್ಲಿ ಕಂಠಪೂರ್ತಿ ಎಣ್ಣೆ ಹೊಡೆಸಿದ್ದರು. ಬಳಿಕ ಪರಪ್ಪನ ಅಗ್ರಹಾರದಲ್ಲಿ ಸುಶಾಂತ್ ಈ ಹಿಂದೆ ಕೊಟ್ಟಿದ್ದ ಕಿರುಕುಳ ನೆನೆಸಿಕೊಂಡು, ಸುಶಾಂತ್ ನ ಬೈಕಿನಲ್ಲಿ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ ಎಂದು ದಕ್ಷಿಣ ವಲಯ ಡಿಸಿಪಿ ಶರಣಪ್ಪ ಅವರು ಹೇಳಿದ್ದಾರೆ.ಸದ್ಯಕ್ಕೆ ಸುಬ್ರಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಆರೋಪಿಗಳಾದ ಯೋಗೇಶ್ ಮತ್ತು ಅರ್ಜುನರನ್ನು ಬಂಧಿಸಿ ಮತ್ತೆ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


