ಮಡಿಕೇರಿ: ಮನನೊಂದು ಕೊಡಗು ಸಂತ್ರಸ್ತರೊಬ್ಬರು ನೀರಾವರಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಗುಡ್ಡೆ ಹೊಸೂರಿನಲ್ಲಿ ನಡೆದಿದೆ.ಮೂಲತಃ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದ ನಿವಾಸಿಯಾದ ವಿಜು ಭೀಮಯ್ಯ(42) ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಇವರ ಮನೆಯೂ ಹಾನಿಯಾಗಿದ್ದು, ಆ ಕಾರಣದಿಂದಾಗಿ ಇತ್ತೀಚೆಗೆ ಗುಡ್ಡೆಹೊಸೂರುನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ.ಗುಡ್ಡೆ ಹೊಸೂರಿನ ಬಿಎಂ ರಸ್ತೆಯ ರಾಜೇಶ್ ಹಲೋ ಬ್ರಿಕ್ಸ್ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ವಿಜು ಭೀಮಯ್ಯ 2 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು.ಭಾನುವಾರ ರಾತ್ರಿ ಪತ್ನಿ ಜಾನಕಿ ಹಾಗೂ ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದರು. ಪತ್ನಿ ಮಕ್ಕಳು ನಿದ್ದಗೆ ಜಾರಿದ ಬಳಿಕ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


