ರಾಯಚೂರು: ನಗರದ ಟೆಲಿಕಾಂ ಕಾಲೋನಿಯ ಮನೆಯ ಕಾಂಪೌಡಿನಲ್ಲಿದ್ದ ಬೈಕುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದ್ದಾರೆ.ಟೆಲಿಕಾಂ ಕಾಲೋನಿ ನಿವಾಸಿ ಅಬ್ದುಲ್ ಮಜೀದ್ ಎಂಬವರಿಗೆ ಸೇರಿದ್ದ ಎರಡು ಬೈಕ್‍ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆಯ ಕಾಂಪೌಂಡ್ ಬಳಿ ನಿಲ್ಲಿಸಿದ್ದ ಬೈಕ್‍ಗಳಿಗೆ ಶನಿವಾರ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಂಚಿದ್ದಾರೆ. ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಎರಡೂ ಬೈಕುಗಳು ಸಂಪೂರ್ಣವಾಗಿ ಸುಟ್ಟುಹೋಗಿದೆ.ಸುಮಾರು 1.60 ಲಕ್ಷ ರೂಪಾಯಿ ಮೌಲ್ಯದ ಟಿವಿಎಸ್‍ನ ಅಪಾಚಿ ಹಾಗೂ ಹೋಂಡಾದ ಸ್ಟನ್ನರ್ ಬೈಕುಗಳು ಸುಟ್ಟುಹೋಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಘಟನೆ ಸಂಬಂಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


