ಬೆಳಗಾವಿ: ಕೃಷ್ಣಾ ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ನಡೆದಿದೆ.ಮೂವರು ಯಡೂರು ಕಲ್ಲೋಳ ಬ್ರಿಡ್ಜ್ ಕಮ್ ಬಂದಾರದ ಮೇಲಿಂದ ಕೃಷ್ಣಾ ನದಿಗೆ ಹಾರಿದ್ದಾರೆ ಎಂದು ತಿಳಿದು ಬಂದಿದ್ದು, ಮೃತರು ಯಡೂರು ಗ್ರಾಮದ ಅಶೋಕ ಕಾಂಬ್ಳೆ(70) ಪತ್ನಿ ನಿರ್ಮಲಾ ಕಾಂಬ್ಳೆ(60) ಮತ್ತು ಪುತ್ರ ಅರುಣ್ ಕಾಂಬ್ಳೆ(33) ಎಂದು ಗುರುತಿಸಲಾಗಿದೆ.ನಾಲ್ಕು ದಿನದ ಹಿಂದೆ ಮನೆಗೆ ಬೀಗ ಹಾಕಿ ಊರು ಬಿಟ್ಟು ಬಂದಿದ್ದ ಕುಟುಂಬಸ್ಥರು ಶವವಾಗಿ ಸಿಕ್ಕಿರುವುದು ಗ್ರಾಮಸ್ಥರಿಗೂ ಆತಂಕ ಮೂಡಿಸಿದೆ. ಇವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಸಾಲ ಹಾಗೂ ಮಗನ ಮದುವೆ ಆಗದೇ ಇರುವ ಕೊರಗು ಈ ಕುಟುಂಬದಲ್ಲಿ ಇತ್ತು ಎನ್ನಲಾಗಿದೆ.ಘಟನೆ ನಡೆದ ಸ್ಥಳಕ್ಕೆ ಅಂಕಲಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡಸಿದ್ದಾರೆ. ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


