ಬೆಂಗಳೂರು: ಬಿಗ್‍ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರು ತಮ್ಮ ಜೀವನದಲ್ಲಿ ತಿರುವು ಸಿಕ್ಕ ಬಗ್ಗೆ ಹೇಳಿಕೊಂಡಿದ್ದಾರೆ.ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕನ್ನಡ ಕೋಗಿಲೆ’ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಾರದ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ನಟ ರಾಘವೇಂದ್ರ ರಾಜ್‍ಕುಮಾರ್ ಮತ್ತು ಅವರ ಪುತ್ರ ವಿನಯ್ ರಾಜ್ ಕುಮಾರ್ ಆಗಮಿಸಿದ್ದರು. ಈ ವೇಳೆ ತಮ್ಮ ಹಿಂದಿನ ಜೀವನದಲ್ಲಿ ತಿರುವು ಸಿಕ್ಕ ಬಗ್ಗೆ ನೆನೆದು ಮಾತನಾಡಿದ್ದಾರೆ.ಚಂದನ್ ಹೇಳಿದ್ದೇನು?
ಇಂದಿಗೂ ನಾನು ರಾಜಣ್ಣ ಅವರ ಸಮಾಧಿ ಮುಂದೆ ಹೋಗುವಾಗ ಗಾಡಿ ನಿಲ್ಲಿಸಿ ನಮಸ್ಕಾರ ಮಾಡಿ ಮುಂದೆ ಹೋಗುತ್ತೇನೆ. ಅವರಲ್ಲಿ ಅಷ್ಟು ಶಕ್ತಿ ಇದೆ ಎಂದು ನಾನು ನಂಬುತ್ತೇನೆ. ಇಲ್ಲವಾದರೆ ಇಷ್ಟೊಂದು ಎನರ್ಜಿ ನಮಗೆಲ್ಲಾ ತುಂಬಲು ಸಾಧ್ಯನೇ ಇಲ್ಲ. ಆದ್ದರಿಂದ ಅವರಲ್ಲಿ ಅಪಾರವಾದ ಎನರ್ಜಿ ಇದೆ ಎಂದು ಹೇಳಿದ್ರು.ಒಂದು ದಿನ ನಾನು ಗೊರಗುಂಟೆಪಾಳ್ಯದಲ್ಲಿ ಹೆಬ್ಬಾಳಕ್ಕೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆ. ಆಗ ಬಸ್ ಬರಲು ತಡವಾಗುತ್ತಿತ್ತು. ಈ ಸಂದರ್ಭದಲ್ಲಿ ಮೊದಲ ಬಾರಿಗೆ ನಾನು ಅಣ್ಣರವರ ಸಮಾಧಿ ಬಳಿ ಹೋಗಿದ್ದೆ. ಸಮಾಧಿ ಬಳಿ ಹೋಗುತ್ತಿದ್ದಂತೆ ಅಳು ಬಂತು, ನಂತರ ಇಷ್ಟು ದೊಡ್ಡ ಬೆಂಗಳೂರಿನಲ್ಲಿ ನನಗೆ ಒಂದು ಕೆಲಸ ಕೊಡಿಸಿ ಎಂದು ಕೇಳಿಕೊಂಡು ಮನೆಗೆ ಬಂದೆ.ಅದಾದ ಎರಡು ದಿನದಲ್ಲಿ ನನಗೆ ಪವರ್ ಸ್ಟಾರ್ ಸಿನಿಮಾಗೆ ಲಿರಿಕ್ಸ್ ಬರೆಯುತ್ತೀರಾ ಅಂತ ಒಂದು ಕರೆ ಬಂತು. ಕೊನೆಗೆ ಲಿರಿಕ್ಸ್ ಬರೆದು ಹಾಡನ್ನು ಹಾಡಿದೆ. ಇದು ನನ್ನ ಜೀವನದಲ್ಲಿ ಆದ ಮಿರಾಕಲ್ ಎಂದು ಚಂದನ್ ಬಿಚ್ಚಿಟ್ಟರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


