ತುಮಕೂರು: 40 ವರ್ಷದ ವ್ಯಕ್ತಿಯೊಬ್ಬ ಅಪ್ರಾಪ್ತೆಯನ್ನು ಪುಸಲಾಯಿಸಿ ಮದುವೆಯಾಗಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.ಚಿತ್ರದುರ್ಗ ಮೂಲದ ಶಿವಣ್ಣ(40) ಮದುವೆಯಾದ ವ್ಯಕ್ತಿ. ಈತ ಅಪ್ರಾಪ್ತೆಯನ್ನು ಪುಸಲಾಯಿಸಿ ಮದುವೆಯಾಗಿದ್ದು, ಬಳಿಕ ಆಕೆಯನ್ನ ಕರೆದುಕೊಂಡು ಪರಾರಿಯಾಗಿದ್ದನು. ಸದ್ಯಕ್ಕೆ ಆರೋಪಿಯನ್ನು ಮಾಗಡಿ ತಾಲೂಕಿನ ಹೊಳಕಲ್ ಬಳಿ ಪೊಲೀಸರು ಬಂಧಿಸಿದ್ದಾರೆ.ಆರೋಪಿ ಶಿವಣ್ಣ ಕಳೆದ ಐದು ವರ್ಷದಿಂದ ಕೊರಟಗೆರೆಯ ತೋವಿನಕೆರೆಯ ತೋಟದಲ್ಲಿ ಕೆಲಸಮಾಡುತಿದ್ದನು. ಈಗಾಗಲೇ ಆರೋಪಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಪತ್ನಿ, ಮಕ್ಕಳು ಚಿತ್ರದುರ್ಗದಲ್ಲಿ ಇದ್ದರು. ಈತ ಮಾತ್ರ ಕೆಲಸಕ್ಕಾಗಿ ತುಮಕೂರಿಗೆ ಬಂದು ನೆಲೆಸಿದ್ದನು.ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತೆಯ ಪರಿಚಯ ಮಾಡಿಕೊಂಡಿದ್ದನು. ಹೀಗೆ ಆದ ಪರಿಚಯದಿಂದ ಸ್ನೇಹ ಬೆಳೆಸಿ ಆಕೆಯನ್ನ ಪುಸಲಾಯಿಸಿ ಸುಮಾರು 10 ದಿನಗಳ ಹಿಂದೆ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ. ಬಳಿಕ ಹುಡುಗಿಯ ಕುಟುಂಬದವರು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದರು.ಸದ್ಯ ದೂರು ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕೊರಟಗೆರೆ ಠಾಣೆಯಲ್ಲಿ ಪೋಕ್ಸೋ ಮತ್ತು ಬಾಲ್ಯ ವಿವಾಹ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


