ಮಂಗಳೂರು: ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯುಟಿ ಖಾದರ್ ದೊಡ್ಡ ವಿವಾದಕ್ಕೀಡಾಗಿದ್ದಾರೆ. ಮಂಗಳೂರನ್ನ ಸ್ಮಾರ್ಟ್ ಸಿಟಿ ಮಾಡಿ ಅಂತ ಕೊಟ್ಟಿರೋ 15 ಕೋಟಿ ಹಣವನ್ನ ಅಕ್ರಮಗಳ ಆರೋಪ ಹೊತ್ತಿರುವ ಕುದ್ರೋಳಿ ಕಸಾಯಿಖಾನೆಗೆ ಕೊಟ್ಟಿದ್ದಾರೆ.ಜಿಲ್ಲೆಯಲ್ಲಿ ಕದ್ದ ದನಗಳನ್ನೆಲ್ಲಾ ಕುದ್ರೋಳಿ ಕಸಾಯಿಖಾನೆಯಲ್ಲೇ ವಧೆ ಮಾಡಲಾಗುತ್ತದೆ ಎಂಬ ಆರೋಪವಿದೆ. ಆದ್ರೆ ಈಗ ಅದೇ ಕಸಾಯಿಖಾನೆ ಅಭಿವೃದ್ಧಿಗೆ ಸಚಿವ ಯುಟಿ ಖಾದರ್ 15 ಕೋಟಿ ರೂಪಾಯಿ ಅನುದಾನ ನೀಡಿರೋದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ ಗೋಶಾಲೆಗಳಿಗೆ ಕೊಡಬೇಕಾದ ಅನುದಾನ ಇನ್ನೂ ಮಂಜೂರಾಗಿಲ್ಲ. ಇದ್ರಿಂದ ಗೋ ಶಾಲೆಗಳು ಸರ್ಕಾರ ಮುಂದೆ ಕೈಯೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ನಡುವೆ ಯು.ಟಿ. ಖಾದರ್ ಒಂದೇ ಕಸಾಯಿಖಾನೆಗೆ 15 ಕೋಟಿ ಅನುದಾನ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಜನರು ತಿನ್ನುವ ಆಹಾರ ಶುಚಿಯಾಗಿರಬೇಕೆಂದು ಹಣ ನೀಡಿದ್ದೇನೆ ಅಂತಾ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


