ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಯ ಪಕ್ಕದ ಇಳಿಜಾರಿಗೆ ಬಿದ್ದಿರುವ ಘಟನೆ ಕಾರವಾರ ತಾಲೂಕಿನ ಕೊಡ್ಸಳ್ಳಿ ಗ್ರಾಮದ ಬಳಿ ನಡೆದಿದೆ.ಕದ್ರಾದಿಂದ ಕೊಡ್ಸಳ್ಳಿಗೆ ತೆರಳುತ್ತಿರುವಾಗ ಸುಮಾರು ಬೆಳಗ್ಗೆ 11.30ಕ್ಕೆ ಅಪಘಾತ ನಡೆದಿದೆ. ಬಸ್ಸಿನಲ್ಲಿ ಒಟ್ಟು 25 ರಿಂದ 30 ಜನರು ಪ್ರಯಾಣಿಸುತ್ತಿದ್ದರು. ಸ್ಟೇರಿಂಗ್ ಬೆಲ್ಟ್ ತುಂಡಾಗಿದ್ದರಿಂದ ರಸ್ತೆ ಪಕ್ಕದ ಇಳಿಜಾರಿಗೆ ಬಸ್ ಇಳಿದಿದೆ. ಈ ಅವಘಡದ ಪರಿಣಾಮ ಬಸ್ಸಿನಲ್ಲಿದ್ದ 8 ಮಂದಿಗೆ ಗಾಯಾಗಳಾಗಿವೆ. ಗಾಯಾಳುಗಳನ್ನು ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಅಪಘಾತಕ್ಕೀಡಾದ ಬಸ್ ಕರ್ನಾಟಕ ವಿದ್ಯುತ್ ನಿಗಮಕ್ಕೆ ಸೇರಿದೆ. ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.Sign in to your account
Username or Email Address


Password

 Remember Me


