ತುಮಕೂರು: ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಮೇಲೆ ಪಿಎಸ್‍ಐ ಫೈರಿಂಗ್ ನಡೆಸಿದ್ದಾರೆ.ಆರೋಪಿ ರಾಜಿ ಅಲಿಯಾಸ್ ರಾಜೇಶ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೋರಾ ಪಿಎಸ್‍ಐ ರವಿಕುಮಾರ್ ಅವರು ಫೈರಿಂಗ್ ನಡೆಸಿದ್ದಾರೆ. ಈ ವೇಳೆ ಆರೋಪಿಗೆ ಗಾಯವಾಗಿದ್ದು, ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಿಎಸ್‍ಐ ರವಿಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಅವರಿಗೂ ಗಾಯವಾಗಿದ್ದೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಏನಿದು ಪ್ರಕರಣ?
ಟಾಟಾ ಏಸ್‍ನಲ್ಲಿ ಬಂದ 7 ಜನ ದುಷ್ಕರ್ಮಿಗಳು ರವಿಕುಮಾರ್ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ರವಿ ಅವರು ಕೈಯಲ್ಲಿದ್ದ ಟೀಯನ್ನು ದುಷ್ಕರ್ಮಿಗಳ ಮುಖದ ಮೇಲೆ ಎರಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಅವರು ರವಿಯ ತಲೆಗೆ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಹೊಡೆತದ ರಭಸಕ್ಕೆ ರವಿ ತಲೆ ಛಿದ್ರ ಛಿದ್ರವಾಗಿತ್ತು.ಈ ಹಿಂದೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ರವಿ, ಕಳೆದ 10 ವರ್ಷ ಜೆಡಿಎಸ್ ಪಕ್ಷ ಕಾರ್ಯಕರ್ತನಾಗಿದ್ದರು. ಕಳೆದ 6 ತಿಂಗಳ ಜೆಡಿಎಸ್ ಪಕ್ಷದಿಂದಲೇ ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2015 ರಲ್ಲಿ ಹಟ್ಟಿ ಮಂಜಣ್ಣ ಕೊಲೆ ನಡೆದಿದ್ದು, ಅದರಲ್ಲಿ ರವಿಯ ಕೈವಾಡವಿತ್ತು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಟ್ಟಿ ಮಂಜ ಸಹಚರರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.ಬಟವಾಡಿಯಲ್ಲಿರುವ ಫ್ಲೈಓವರ್ ನ ಕೆಳಗಡೆ ರವಿಕುಮಾರ್ ಶವ ಅಪಘಾತವಾದ ರೀತಿಯಲ್ಲಿ ಬಿದ್ದಿತ್ತು. ಆದ್ರೆ ಶವ ನೋಡಿದವರು ಇದೊಂದು ಕೊಲೆ ಎಂದು ಹೇಳುವ ಹಾಗಿತ್ತು. ಅಪಘಾತವಾದರೆ ಬದಿಯಲ್ಲಿ ಬೀಳಲು ಸಾಧ್ಯವಿಲ್ಲ. ರವಿಕುಮಾರ್ ರೌಡಿಶೀಟರ್ ಆಗಿದ್ದರಿಂದ ಅವರ ಮೇಲೆ ಅನೇಕರು ಕಣ್ಣಿಟ್ಟಿದ್ದರು. ಅಷ್ಟೇ ಅಲ್ಲದೇ ಅವರ ಮೇಲೆ 3-4 ಬಾರಿ ಹಲ್ಲೆ ಪ್ರಯತ್ನಗಳು ಕೂಡ ನಡೆದ್ದಿದ್ದವು. ಹೀಗಾಗಿ ಇದು ಕೊಲೆ ಎಂದು ಹೇಳಲಾಗುತ್ತಿತ್ತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸೀಲನೆ ನಡೆಸಿ ತನಿಖೆ ನಡೆಸಿದ ವೇಳೆ ಟೆಂಪೋ ಪತ್ತೆಯಾಗಿದ್ದು, ಇದು ಕೊಲೆ ಎಂದು ಸ್ಪಷ್ಟವಾಗಿತ್ತು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


