ಚಿತ್ರದುರ್ಗ: ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ನಡೆಸಿರೊ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸ ದುರ್ಗ ಪಟ್ಟಣದ ವಿದ್ಯಾ ನಗರದಲ್ಲಿ ನಡೆದಿದೆ.ಮಂಜುನಾಥ್ ಅವರ ಪುತ್ರ ಫಜಲ್ ರಾತ್ರಿಮನೆಯ ಮುಂದೆ ಆಟವಾಡುತ್ತಿದ್ದಾಗ ಏಕಾಏಕಿ ದಾಳಿ ನಡೆಸಿರೋ ಆರು ಬೀದಿನಾಯಿಗಳು, ಬಾಲಕನನ್ನು ಸುತ್ತುವರಿದು ಕಚ್ಚಿವೆ. ಆಗ ಸ್ಥಳೀಯರು ಬಾಲಕನನ್ನ ನಾಯಿಗಳಿಂದ ರಕ್ಷಿಸಿದ್ದು, ಹೊಸದುರ್ಗ ತಾಲೂಕು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ.ಈ ಬೀದಿನಾಯಿಗಳ ಹಾವಳಿ ಕಳೆದ ಆರು ತಿಂಗಳುಗಳಿಂದ ನಿರಂತರವಾಗಿದ್ದು ಮಕ್ಕಳು, ಮಹಿಳೆಯರು ಮನೆಯಿಂದ ಹೊರಬರಲು ಯೋಚಿಸುವಂತಾಗಿದೆ. ಆದ್ರೆ ಈ ಸಮಸ್ಯೆಗೆ ಬ್ರೇಕ್ ಹಾಕಬೇಕಾದ ಪುರಸಭೆ ನಿರ್ಲಕ್ಷ್ಯ ತೋರಿದ್ದು, ನಾಗರೀಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಹೀಗಾಗಿ ಇನ್ನಾದ್ರೂ ಬೀದಿನಾಯಿಗಳ ಹಾವಳಿಗೆ ಪುರಸಭೆ ಬ್ರೇಕ್ ಹಾಕುವಂತೆ ನಾಗರೀಕರು ಆಗ್ರಹಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv Sign in to your account
Username or Email Address


Password

 Remember Me


