ಕಲಬುರಗಿ: ವಿದ್ಯೆ ಕೊಟ್ಟು ಪಾಠ ಕಲಿಸುವ ಶಿಕ್ಷಕನೊಬ್ಬ ಅನಾಥ ವಿದ್ಯಾರ್ಥಿನಿಯರಿಗೆ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣವೊಂದು ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ.ಬಸವರಾಜ್ ಕಲಬುರಗಿಯ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ. ಅನಾಥ ಮಕ್ಕಳೇ ಈತನ ಟಾರ್ಗೆಟ್ ಆಗಿದ್ದು, ವಿದ್ಯಾರ್ಥಿನಿಯರನ್ನು ತನ್ನ ಕೊಠಡಿಗೆ ಕರೆಸಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಈತನ ಕಾಮದಾಟದಿಂದ ಬೇಸತ್ತ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.ಅನಾಥ ಮಕ್ಕಳು ಅಂದರೆ ಅವರಿಗೆ ಹಿಂದೆ-ಮುಂದೆ ಯಾರೂ ಇರಲ್ಲ ಎಂದುಕೊಂಡು ಕಾಮಿ ಶಿಕ್ಷಕ, ಈ ಹಿಂದೆಯೂ ಕೂಡ ಸಾಕಷ್ಟು ಅನಾಥ ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ದೌರ್ಜನ್ಯವೆಸಗಿದ್ದಾನೆ. ಸದ್ಯ ಕಾಮುಕ ಶಿಕ್ಷಕ ಬಸವರಾಜ್ ಕಲಬುರಗಿ ಪೊಲೀಸರ ಅತಿಥಿಯಾಗಿದ್ದಾನೆ.ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿ, ತಿದ್ದಿ ತೀಡುವ ಗುರುವಿಗೆ ಅತ್ಯುನ್ನತ ಸ್ಥಾನ ಇದೆ. ಆದರೆ ಈ ಶಿಕ್ಷಕ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಬಿಟ್ಟು ಕಾಮದಾಟ ಆಡುತ್ತಾ ಸಮಾಜ ತಲೆ ತಗ್ಗಿಸುವ ಕೆಲಸ ಮಾಡಿದ್ದಾನೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


