ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮಡದಿ, ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಧಿಕಾ ಅವರಿಗೆ ಗೆಳತಿಯರಾದ ಪ್ರತಿಭಾ ಸುರೇಶ್, ಸಾನಿಯಾ ಸರ್ದರಿಯಾ ಮತ್ತು ವನಿತಾ ಉಮೇಶ್ ಮೂವರು ಸರ್ಪ್ರೈಸ್ ನೀಡಿದ್ದಾರೆ.ಗರ್ಭಿಣಿಗೆ ಸಾಮಾನ್ಯವಾಗಿ ಬಗೆ ಬಗೆಯ ತಿನಿಸುಗಳನ್ನು ತಿನ್ನಬೇಕೆಂಬ ಬಯಕೆ ಉಂಟಾಗುತ್ತದೆ. ಗರ್ಭಿಣಿ ರಾಧಿಕೆಯ ಬಯಕೆಯನ್ನ ಅರಿತ ಗೆಳತಿಯರು ವಿವಿಧ ಭಕ್ಷ್ಯ, ಭೋಜನ ಸಿದ್ಧಪಡಿಸಿ ರಾಮಾಚಾರಿ ಮಡದಿಗೆ ನೀಡಿದ್ದಾರೆ. ಗೆಳತಿಯರು ತನಗಾಗಿ ಸಿದ್ಧಪಡಿಸಿ ತಂದ ಆಹಾರ ಪದಾರ್ಥ ನೋಡಿದ ಮೊಗ್ಗಿನ ಚೆಲುವೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.ಫೋಟೋದಲ್ಲಿ ಮೂವರು ಗೆಳತಿಯರೊಂದಿಗೆ ರಾಧಿಕಾರ ತಾಯಿ ಮತ್ತು ಬಗೆಗೆ ತಿಂಡಿ, ಸಿಹಿ ಪದಾರ್ಥಗಳನ್ನು ಕಾಣಬಹುದಾಗಿದೆ. ನನ್ನ ಆಪ್ತ ಗೆಳತಿಯರು ನನಗಾಗಿ ಪ್ರೀತಿಯಿಂದ ಮಾಡಿಕೊಂಡ ಬಂದ ಅಡುಗೆ ಎಂಬ ಸಾಲುಗಳನ್ನು ಬರೆದು, ಮೂವರಿಗೂ ಟ್ಯಾಗ್ ಮಾಡಿದ್ದಾರೆ.ಈ ಹಿಂದೆ ರಾಧಿಕಾ ಖುದ್ದು ತಾವೇ ಆಹಾರ ಸೇವಿಸುತ್ತಿರುವ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದರು. ನಂತರ ಬೇಬಿ ಮೂನ್ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಾ ಬಂದಿದ್ದಾರೆ. ತಾವು ಗರ್ಭಿಣಿಯಾಗಿದ್ದರೂ, ‘ಆದಿ ಲಕ್ಷ್ಮಿ ಪುರಾಣ’ ಸಿನಿಮಾಗೆ ಡಬ್ಬಿಂಗ್ ಮಾಡುವ ಮೂಲಕ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


