ಬೆಂಗಳೂರು: ಟಾಲಿವುಡ್ ನಟ ವಿಜಯ್ ದೇವರಕೊಂಡ ತಮ್ಮ `ಗೀತಾ ಗೋವಿಂದಂ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರೊಂದಗಿನ ಕಿಸ್ಸಿಂಗ್ ಸೀನ್ ಹಾಗೂ ರಕ್ಷಿತ್ ಬ್ರೇಕಪ್ ಬಗ್ಗೆ ಮಾತನಾಡಿದ್ದು, ರಕ್ಷಿತ್ ಹಾಗೂ ರಶ್ಮಿಕಾ ಅವರ ಲವ್ ಬ್ರೇಕಪ್ ಆಗಿದ್ದಾರೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.ವಿಜಯ್ ದೇವರಕೊಂಡ ಅವರ ಅಪ್ ಕಮಿಂಗ್ ಸಿನಿಮಾ `ನೋಟಾ’ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ರಶ್ಮಿಕಾ ಅವರ ಕುರಿತ ಪ್ರಶ್ನೆಗೆ ಉತ್ತರಿಸಿದ ವಿಜಯ್, ಮಂದಣ್ಣ ಅವರ ಜೊತೆ ಅಭಿನಯಿಸಿರುವುದು ಖುಷಿ ತಂದಿದೆ. ಆದರೆ ಬೇರೆ ಒಬ್ಬರಿಗೆ ನೋವುಂಟು ಮಾಡುವ ವಿಚಾರಗಳಿಂದ ಮನರಂಜನೆ ಪಡೆದು ಉತ್ತಮ ಎನಿಸುವುದಿಲ್ಲ. ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ತಿಳಿದಿದ್ದು, ಇಂತಹ ಎಷ್ಟು ನೋವು ಅನುಭವಿಸಿದ್ದಾರೆ ಎಂದು ನನಗೆ ತಿಳಿದಿದೆ. ಈ ಕುರಿತು ನಿರ್ಣಯ ಮಾಡಿಕೊಳ್ಳಲು ಅವರಿಗೆ ಮೊದಲು ಸಮಯ ನೀಡಬೇಕು ಎಂದು ತಿಳಿಸಿದರು.ಇದೇ ವೇಳೆ ರಕ್ಷಿತ್ ಅವರ `ಅವನೇ ಶ್ರೀಮನ್ನಾರಾಯಣ’ ಸಿನಿಮಾ ಕುರಿತು ಕುತೂಹಲ ವ್ಯಕ್ತಪಡಿಸಿದ ವಿಜಯ್, ರಕ್ಷಿತ್ ವರ್ಕ್ ಅನ್ನು ನಾನು ಬಹಳ ಇಷ್ಟಪಡುತ್ತೇನೆ. ಅಲ್ಲದೇ ರಶ್ಮಿಕಾ ಹಾಗೂ ರಕ್ಷಿತ್ ಇಬ್ಬರಿಗೂ ನಾನು ತುಂಬಾ ಗೌರವ ನೀಡುತ್ತೇನೆ. ಆದರೆ ಈ ವಿಚಾರದ ಕುರಿತು ಅವರೇ ಮಾತನಾಡಿದರೆ ಉತ್ತಮ ಎಂದು ತಿಳಿಸಿದರು.ಇದಕ್ಕೂ ಮುನ್ನ ಸುದ್ದಿಗೋಷ್ಠಿಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಕನ್ನಡದಲ್ಲೇ ಶುಭಕೋರಿದ ವಿಜಯ್, `ನೋಟಾ’ ಚಿತ್ರ ಇದೇ ಶುಕ್ರವಾರ ತೆರೆ ಕಾಣಲಿದೆ. ಎಲ್ಲರೂ ಸಿನಿಮಾ ವೀಕ್ಷಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಮತ್ತು ಜ್ಞಾನವೇಲು ರಾಜು ಭಾಗವಹಿಸಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Sign in to your account
Username or Email Address


Password

 Remember Me


