ಬೆಂಗಳೂರು: ವಿಕ್ಟರಿ 2 ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲು ಆಗಮಿಸುತ್ತಿರುವ ನಟ ಶರಣ್‍ರ ಸಿನಿಮಾದ ಕುಟ್ಟು ಕುಟ್ಟು ಹಾಡು ಬಿಡುಗಡೆಯಾಗಿದೆ.ಟೀಸರ್ ಮೂಲಕವೇ ತೀವ್ರ ಕುತೂಹಲ ಮೂಡಿಸಿದ್ದ ವಿಕ್ಟರಿ-2 ಸಿನಿಮಾದ ಕುಟ್ಟು ಕುಟ್ಟು ಸಾಂಗ್ ಕ್ಯಾಚಿ ಸಾಲುಗಳ ಮೂಲಕ ಕೇಳುಗರನ್ನು ಕುಣಿಯುವಂತೆ ಮಾಡುತ್ತಿರುವ ಹಾಡು ಎಲ್ಲರಿಗೂ ಇಷ್ಟವಾಗುತ್ತಿದೆ. ಹಳ್ಳಿ ಭಾಷೆ ಸೊಗಡಿನ ಹಾಡಿನ ಸಾಲುಗಳ ಅಬ್ಬರ ಜೋರಾಗಿದ್ದು, ಉತ್ತರ ಕರ್ನಾಟಕ ಜವಾರಿ ಹಾಡಿನ ಶೈಲಿ ಸಿನಿಮಾ ಮೇಲಿನ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.ವಿಕ್ಟರಿ ಮೂಲಕ ಮತ್ತೊಂದು ಭರ್ಜರಿ ಯಶಸ್ವಿ ಗಳಿಸಿಕೊಳ್ಳುವ ವಿಶ್ವಾಸದಲ್ಲಿರುವ ಶರಣ್ ಅವರು ಹಾಡಿನಲ್ಲಿ ಸಖತ್ ಡಾನ್ಸ್ ಮಾಡಿದ್ದು, ಅಭಿಮಾನಿಗಳ ಮನಗೆದ್ದಿದ್ದಾರೆ. ಅಲ್ಲದೇ ತಮ್ಮ ಡಾನ್ಸ್ ಗೆ ತಾವೇ ಸಾಟಿ ಎಂದು ನಿರೂಪಿಸಿದ್ದು, ಶರಣ್ ಅವರಿಗೆ ಸಾಥ್ ನೀಡಿರುವ ನಾಯಕಿ ಅಪೂರ್ವ ಡಾನ್ಸ್ ಕೂಡ ಅಭಿಮಾನಿಗಳಲ್ಲಿ ಖುಷಿ ತಂದಿದೆ.ಹಾಡಿಗೆ ಅರ್ಜುನ್ ಜನ್ಯಾ ಸಂಗೀತಾವಿದ್ದು ಮಾಸ್ ಹಾಡಿನ ಮೂಲಕ ಅಭಿಮಾನಿಗಳಿಂದ ಪ್ರಶಂಸೆಗಳಿಸಿದ್ದಾರೆ. ಚಿತ್ರ ಅಪೂರ್ವ, ಅಸ್ಮಿತಾ ಸೂದ್, ರವಿಶಂಕರ್, ಸಾಧುಕೋಕಿಲಾ, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಗಣವನ್ನು ಹೊಂದಿದೆ. ದೀರ್ ಕಥೆ ಬರೆದಿದ್ದು, ಅಲೆಮಾರಿ ಸಂತು ನಿರ್ದೇಶನ ಮತ್ತು ತರುಣ್ ಶಿವಪ್ಪ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಇದನ್ನು ಓದಿ: ಪ್ಲೀಸ್ ಟ್ರಸ್ಟ್, ನಾನು ಚೀಪ್ & ಬೆಸ್ಟ್- ಆಸ್ಮಿತಾ ಜೊತೆ ವಿಕ್ಟರಿ ಶರಣ್ ಡ್ಯಾನ್ಸ್ಫಸ್ಟ್ ಲುಕ್ ನಲ್ಲಿ ಡಬಲ್ ಶೇಡ್‍ನಲ್ಲಿ ಕಾಣಿಸಿಕೊಂಡಿರುವ ಶರಣ್ ಅವರ ಪಾತ್ರ ಕುರಿತು ಹೆಚ್ಚಿನ ಆಸಕ್ತಿ ಕೆರಳಿಸಿದೆ. ಇತ್ತೀಚೆಗೆ ರ್ಯಾಂಬೊ-2 ಚಿತ್ರದ ಮೂಲಕ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದ ಶರಣ್ ಅವರಿಗೆ ವಿಕ್ಟರಿ-2 ಸಿನಿಮಾದಿಂದ ಮತ್ತೊಂದು ಯಶಸ್ಸು ನೀಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.  ಇದನ್ನು ಓದಿ: ಎರಡನೇ ವಿಕ್ಟರಿಯಲ್ಲಿ ಡಬಲ್ ಫನ್ ಫಿಕ್ಸ್ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


