ಬೆಂಗಳೂರು: ಅಮ್ಮನ ಮೇಲೆ ಅಪಾರ ಪ್ರೀತಿ ಹೊಂದಿರುವ ನಟ ದುನಿಯಾ ವಿಜಯ್ ಅವರ ತಾಯಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಒಬ್ಬರೆ ಆಟೋದಲ್ಲಿ ಆಸ್ಪತ್ರೆಗೆ ತೆರಳಿ ಮನೆಗೆ ವಾಪಸ್ ಆಗಿದ್ದಾರೆ.ವಿಜಯ್ ಅವರ ವಿವಾದಗಳಿಂದ ಬೇಸತ್ತಿರುವ ತಂದೆ ತಾಯಿ ಇಬ್ಬರು ಈ ಕುರಿತು ಚಿಂತೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಅವರಿಗೆ ಅನಾರೋಗ್ಯ ಉಂಟಾಗಿದೆ ಎನ್ನಲಾಗಿದೆ. ಸದ್ಯ ವಿಜಯ್ 2ನೇ ಪತ್ನಿ ಕೀರ್ತಿ ಅವರೊಂದಿಗೆ ವಿಶ್ರಾಂತಿ ಪಡೆಯಲು ಮಡಿಕೇರಿಗೆ ತೆರಳಿದ್ದಾರೆ. ಮಂಗಳವಾರ ಗಿರಿನಗರ ಪೊಲೀಸ್ ಠಾಣೆಗೆ ತೆರಳಿದ್ದ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ನನ್ನ ಇಬ್ಬರು ಹೆಣ್ಣು ಮಕ್ಕಳು ತಾಯಿ ನಾಗರತ್ನ ಮಾತು ಕೇಳಿಕೊಂಡು ನನ್ನ ವಿರುದ್ಧವೇ ದೂರು ನೀಡುವ ಸಾಧ್ಯತೆ ಇದೆ. ಮಕ್ಕಳು ಏನಾದರು ದೂರು ಕೊಟ್ಟರೆ ಪರಿಶೀಲಿಸಿ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಮುಂದೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ದುನಿಯಾ ವಿಜಿ ಹೆಣ್ಣು ಮಕ್ಕಳ ದೂರಿನಿಂದ ಮತ್ತೆ ಜೈಲು ಪಾಲಾಗುವ ಭೀತಿಯಲ್ಲಿದ್ದಾರೆ. ಬಳಿಕ ನೇರ ಅಲ್ಲಿಂದ ಮಡಿಕೇರಿಗೆ ತೆರಳಿದ್ದರು. ಆದರೆ ಸದ್ಯ ತಾಯಿಯ ಅನಾರೋಗ್ಯ ವಿಚಾರ ತಿಳಿದು ವಿಜಯ್ ಮತ್ತೆ ವಾಪಸ್ ಆಗುವ ಸಾಧ್ಯತೆಗಳಿದೆ.ಈ ಹಿಂದೆ ಹಲವು ಬಾರಿ ಮೊದಲ ಪತ್ನಿ ನಾಗರತ್ನ ಅವರ ವಿರುದ್ಧ ಆರೋಪ ಮಾಡಿದ್ದ ವಿಜಯ್, ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರಿದ್ದರು. ಅಲ್ಲದೇ ನ್ಯಾಯಾಲಯದಿಂದ ಜಾಮೀನು ಪಡೆದು ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದ ವೇಳೆಯೂ ಮೊದಲ ಪತ್ನಿಯ ವಿರುದ್ಧ ಸಾಕ್ಷಿ ಸಮೇತ ಹಲವು ಆರೋಪ ಮಾಡಿದ್ದರು.ಇದರ ನಡುವೇ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರು ಇಂದು ಸಂಜೆ ಸುದ್ದಿಗೋಷ್ಠಿ ನಡೆಸಲಿದ್ದು, ವಿಜಯ್ ಕುರಿತ ಕೆಲ ಸ್ಫೋಟಕ ಸತ್ಯಗಳನ್ನು ಬಿಚ್ಚಿಡಲಿದ್ದೇನೆ ಎಂದು ತಿಳಿಸಿದ್ದಾರೆ. ಈ ಹಿಂದೆ ವಿಜಯ್ ಅವರ ವಿರುದ್ಧ ಯಾವುದೇ ಆರೋಪವನ್ನು ಮಾಡದ ನಾಗರತ್ನ ಅವರು ಕೀರ್ತಿ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದರು. ಅಲ್ಲದೇ ಕೀರ್ತಿ, ವಿಜಯ್ ಅವರ ವಿವಾಹ ನಡೆದಿಲ್ಲ ಎಂದು ಆರೋಪಿಸಿದ್ದರು. ಎಂದಿಗೂ ದುನಿಯಾ ವಿಜಯ್ ಅವರು ತಮ್ಮ ತಪ್ಪು ತಿಳಿದು ಮತ್ತೆ ನನ್ನ ಬಳಿ ಬರುತ್ತಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


