ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಒಂದೇ ಕಾಲು ಹಾಗೂ ಬಾಲ ಇರುವ ಮಗು ಜನಿಸಿದೆ.ಶನಿವಾರಸಂತೆಯ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಈ ರೀತಿಯ ಮಗು ಜನಿಸಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿತ್ತು. ಚಂಗಡಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಭುವನಳ್ಳಿ ಗ್ರಾಮದ ಚಿನ್ನಮ್ಮ ಮತ್ತು ಮೂರ್ತಿ ದಂಪತಿಗೆ ಈ ಮಗು ಜನಿಸಿದೆ. ಬಾಲ ಇರುವ ಕಾರಣ ಮಗು ಗಂಡೋ ಹೆಣ್ಣೋ ಎಂದು ತಿಳಿಯಲು ಯಾವುದೇ ಅಂಗಗಳು ಇಲ್ಲವಾಗಿದೆ.ಈ ದಂಪತಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಸ್ಯ್ಕಾನಿಂಗ್ ಮಾಡಿಸಿದ್ದರು. ಸ್ಯ್ಕಾನಿಂಗ್‍ನಲ್ಲಿ ನಾರ್ಮಲಾಗಿ ಇದೆ ಎಂದು ವರದಿ ಬಂದಿತ್ತು. ಸೋಮವಾರ ರಾತ್ರಿ ಚಿನ್ನಮ್ಮ ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ರಾತ್ರಿ 8 ಗಂಟೆಗೆ ಶನಿವಾರಸಂತೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆಸ್ಪತ್ರೆಯ ನರ್ಸ್ ಗೀತಾ ಅವರು ಗರ್ಭಿಣಿ ಚಿನ್ನಮ್ಮ ಅವರಿಗೆ ಹೆರಿಗೆ ಮಾಡಿಸಿದ್ದರು. ಆದರೆ ಒಂದು ಕಾಲು ಮತ್ತು ಬಾಲ ಇರುವ ಮಗು ಜನಿಸಿತ್ತು. ಆದ್ರೆ ಮಗು ಹುಟ್ಟಿದ ಕೊಡಲೇ ಮೃತಪಟ್ಟಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


