ಮಂಡ್ಯ: ಸ್ನೇಹಿತನ ತಲೆಯನ್ನೇ ಕಡಿದು ಠಾಣೆಗೆ ತಂದಿದ್ದ ವ್ಯಕ್ತಿ ರಾಜ್ಯಾದ್ಯಂತ ತನ್ನನ್ನು ಗುರುತಿಸಿಕೊಳ್ಳುವ ಕೆಟ್ಟ ಚಟದಿಂದ ಕೊಲೆ ಮಾಡಿದ್ದಾಗಿ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕೆ ಬಾಗಿಲು ಗ್ರಾಮಸ್ಥರು ಆರೋಪಿಸಿದ್ದಾರೆ.ಅಕ್ಟೋಬರ್ 29 ರಂದು ಚಿಕ್ಕೆಬಾಗಿಲು ಗ್ರಾಮದ ಆರೋಪಿ ಪಶುಪತಿ ತನ್ನದೇ ಗ್ರಾಮದ, ಸ್ನೇಹಿತ ಗಿರೀಶ್ ನ ತಲೆ ಕಡಿದು ಅದನ್ನು ಕೈಯಲ್ಲಿ ಹಿಡಿದುಕೊಂಡು ಮಳವಳ್ಳಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದನು. ಗಿರೀಶ್ ನನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ತಲೆ ಕಡಿದೆ ಎಂದು ಪೊಲೀಸ್ ಠಾಣೆ ಮುಂದೆ ಹೇಳಿಕೊಂಡಿದ್ದನು.  ಇದನ್ನೂ ಓದಿ: ತಾಯಿಯನ್ನು ಬೈದಿದ್ದಕ್ಕೆ ಗೆಳೆಯನ ರುಂಡ ಕತ್ತರಿಸಿ ಠಾಣೆಗೆ ತಂದ!ಪಶುಪತಿ ಆರೋಪವನ್ನು ನಿರಾಕರಿಸುತ್ತಿರುವ ಚಿಕ್ಕೆಬಾಗಿಲು ಗ್ರಾಮಸ್ಥರು, ಕೊಲೆಯಾದ ಗಿರೀಶ್ ತುಂಬಾ ಒಳ್ಳೆಯ ಹುಡುಗ. ಆದರೆ ಕೊಲೆಪಾತಕ ಪಶುಪತಿ ಮುಂಗೋಪಿಯಾಗಿದ್ದು, ನಾನು ಯಾರನ್ನಾದರೂ ಕೊಲೆ ಮಾಡಿ ರಾಜ್ಯಾದ್ಯಂತ ಸುದ್ದಿಯಾಗುತ್ತೇನೆ ಎಂದು ಕೊಲೆ ಮಾಡುವ ಮುನ್ನ ಹೇಳಿಕೊಂಡು ಓಡಾಡುತ್ತಿದ್ದನು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಆರೋಪಿ ಪಶುಪತಿ ತಾನು ಹೇಳಿಕೊಂಡು ಓಡಾಡುತ್ತಿದ್ದಂತೆ ತನ್ನ ಗೆಳೆಯ ಗಿರೀಶ್‍ನ ತಲೆ ಕಡಿದು ನಂತರ ತಲೆಯನ್ನು ಹಿಡಿದುಕೊಂಡು ಗ್ರಾಮದಿಂದ 20 ಕಿಲೋಮೀಟರ್ ದೂರದಲ್ಲಿರುವ ಠಾಣೆಗೆ ಬಂದು, ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದವನ ತಲೆಯನ್ನೇ ಕಡಿದೆ ಎಂದು ಹೀರೋ ರೀತಿ ಬಿಂಬಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಕೊಲೆಯ ಉದ್ದೇಶ ಬೇರೆಯಿದ್ದು, ಈ ಬಗ್ಗೆ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು ಎಂದು ಚಿಕ್ಕೆಬಾಗಿಲು ಗ್ರಾಮಸ್ಥರು ಹೇಳಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


