ಪ್ರಾಂಕ್ ಕಾಲ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿದ್ದ ಡ್ಯಾನಿಶ್ ಸೇಠ್ ಹಂಬಲ್ ಪೊಲಿಟೀಷಿಯನ್ ಆಗಿಯೂ ಅವತಾರವೆತ್ತಿದ್ದರು. ಅವರು ನಟಿಸಿದ್ದ ಕನ್ನಡದ ಪ್ರಥಮ ಚಿತ್ರ ಹಂಬಲ್ ಪೊಲಿಟೀಷಿಯನ್ ನೊಗ್‍ರಾಜ್ ಚಿತ್ರ ಒಂದು ಮಟ್ಟಕ್ಕೆ ಜನಮನ್ನಣೆ ಗಳಿಸಿಕೊಂಡಿತ್ತು. ಆದರೆ ಅವರ ಮುಂದಿನ ಚಿತ್ರ ಯಾವುದೆಂಬುದು ಮಾತ್ರ ಇದುವರೆಗೂ ಪ್ರಶ್ನೆಯಾಗಿಯೇ ಉಳಿದುಕೊಂಡಿತ್ತು.ಅದಕ್ಕೀಗ ಒಂದು ಹಂತದ ಉತ್ತರ ಸಿಕ್ಕಿದೆ. ಈಗ ಹೊರ ಬಿದ್ದಿರೋ ಸುದ್ದಿ ನಿಜವೇ ಆಗಿದ್ದರೆ ಡ್ಯಾನಿಶ್ ಸೇಠ್ ಎರಡನೇ ಚಿತ್ರವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡಲಿದ್ದಾರೆ!ಪುನೀತ್ ರಾಜ್ ಕುಮಾರ್ ಪಿಆರ್‍ಕೆ ಹೆಸರಲ್ಲಿ ಆಡಿಯೋ ಕಂಪೆನಿ ತೆರೆದಿದ್ದು, ಅದೀಗ ಅದ್ಭುತ ಯಶ ಕಂಡಿರೋದೆಲ್ಲ ಕಣ್ಣ ಮುಂದಿದೆ. ಒಳ್ಳೆ ಚಿತ್ರಗಳಿಗೆ ಪ್ರೋತ್ಸಾಹ ನೀಡಬೇಕು, ಹೊಸಾ ಪ್ರತಿಭೆಗಳಿಗೆ ಸಾಥ್ ನೀಡಬೇಕೆಂಬ ಇರಾದೆಯಿಂದಲೇ ಅವರು ಚಿತ್ರ ನಿರ್ಮಾಣಕ್ಕೂ ಇಳಿದದ್ದು ಗೊತ್ತೇ ಇದೆ. ಅವರೀಗ ಡ್ಯಾನಿಶ್ ಸೇಠ್ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆಂಬ ಸುದ್ದಿ ಮಾತ್ರ ಅಧಿಕೃತವೆಂಬಂತೆಯೇ ಹರಿದಾಡಲಾರಂಭಿಸಿದೆ.ಒಂದು ಮೂಲದ ಪ್ರಕಾರ ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆಯಂತೆ. ಪುನೀತ್ ರಾಜ್ ಕುಮಾರ್ ಡ್ಯಾನಿಶ್ ಸೇಠ್ ಚಿತ್ರವನ್ನು ನಿರ್ಮಾಣ ಮಾಡಲು ಉತ್ಸುಕರಾಗಿರೋದೂ ಸತ್ಯ. ಆದರೆ ಅದು ಯಾವಾಗ ಕಾರ್ಯರೂಪಕ್ಕೆ ಬರಲಿದೆ, ಆ ಚಿತ್ರ ಯಾವುದು ಎಂಬುದರ ವಿವರ ಇನ್ನಷ್ಟೇ ಹೊರ ಬೀಳಬೇಕಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


