ಮಂಗಳೂರು: ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮದ್ಯಪಾನ ಮಾಡಿ ಬೈಕ್ ಚಲಾಯಿಸುತ್ತಿದ್ದ ಸೈನಿಕರನ್ನು ಅಡ್ಡಗಟ್ಟಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸಮೀಪದ ಮರ್ದಾಳ, ತಾಕೋಟೆಕೆರೆ ಎಂಬಲ್ಲಿ ನಡೆದಿದೆ.ಹರೀಶ್ ಮತ್ತು ರತ್ನಾಕರ್ ಪಾನಮತ್ತ ಸೈನಿಕರು. ಮದ್ಯಪಾನ ಸೇವಿಸಿ ಚಲಾಯಿಸುತ್ತಿದ್ದ ಬೈಕ್ ತಡೆದ ಹಿನ್ನಲೆಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರ ಮೇಲೆ ಹಲ್ಲೆ ಮಾಡಲು ಸೈನಿಕರಿಗೆ ಸ್ನೇಹಿತರು ಕೂಡ ಸಾಥ್ ನೀಡಿದ್ದಾರೆ. ಹಲ್ಲೆಯ ಪರಿಣಾಮ ಪೊಲೀಸರೊಬ್ಬರು ಗಾಯಗೊಂಡಿದ್ದಾರೆ.ಹಲ್ಲೆ ಮಾಡಿದ ಸೈನಿಕರು ರಜೆ ನಿಮಿತ್ತ ಊರಿಗೆ ಬಂದಿದ್ದರು. ಪ್ರಕರಣ ಸಂಬಂಧ ಹಲ್ಲೆ ಮಾಡಿದ್ದ ಇಬ್ಬರು ಸೈನಿಕರು ಹಾಗೂ ಹಲ್ಲೆ ಮಾಡಲು ಸಾಥ್ ನೀಡಿದ್ದ ಸ್ನೇಹಿತರನ್ನು ಸೇರಿ ನಾಲ್ವರನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnewsSign in to your account
Username or Email Address


Password

 Remember Me


