ಬೆಂಗಳೂರು: ಖಾಕಿ ಖದರ್ ಗೆ ಬೆಚ್ಚಿಬಿದ್ದ ರೌಡಿಶೀಟರ್ ಗಳು ಈಗ ಪೊಲೀಸರ ವಿರುದ್ಧವೇ ಸಿಡಿದೆದ್ದಿದ್ದಾರೆ.ಪೊಲೀಸರು ಸುಖಾಸುಮ್ಮನೆ ಹಿಂಸೆ ಕೊಡ್ತಾರೆ ನಕಲಿ ಎನ್‍ಕೌಂಟರ್ ಇದನ್ನ ವಿರೋಧಿಸಬೇಕು ಅಂತ ಸಿದ್ಧ ಆಗಿರೋ ರೌಡಿಶೀಟರ್ ಗಳು ಸಂಘ ತೆರೆಯಲು ಮುಂದಾಗುತ್ತಿದ್ದಾರೆ. “ಫೈಟ್ ಫಾರ್ ಜಸ್ಟೀಸ್” ಎಂಬ ಸಂಘ ಹುಟ್ಟು ಹಾಕುತ್ತಿರುವ ರೌಡಿಶೀಟರ್ ಗಳು ಸಂಘ ನಿಯಂತ್ರಣ ಮಾಡಲು ಸಂಘಕ್ಕೆ ಲೀಗಲ್ ಅಡ್ವೈಸರ್ ಕೂಡ ಇರಲಿದ್ದಾರೆ ಅಂತೆ.ಒಂದು ಕಚೇರಿಯನ್ನು ತೆರಯಲು ಸಿದ್ಧ ಮಾಡಿರೋ ರೌಡಿಶೀಟರ್ ಗಳು ಮಾನವ ಹಕ್ಕುಗಳ ಆಯೋಗಕ್ಕೆ ಈಗಾಗಲೇ ಭೇಟಿ ನೀಡಿದ್ದು ಮಾಹಿತಿ ರವಾನೆ ಮಾಡಿದ್ದಾರೆ. ಖಾಕಿ ವಿರುದ್ಧ ಯಾರ ರೀತಿ ಹೋರಾಡಬೇಕು ಅನ್ನೋದನ್ನ ಮಾನವ ಹಕ್ಕು ಆಯೋಗದಿಂದ ಮಾಹಿತಿ ಸಂಗ್ರಹಿಸಿದ್ದಾರಂತೆ. ಈ ಎಲ್ಲಾ ಮಾಹಿತಿ ಕಲೆಹಾಕಿರೋ ಗುಪ್ತಚರ ಇಲಾಖೆ ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ರವಾನೆ ಮಾಡಿದೆ. ಸದ್ಯ ಮಾಹಿತಿ ಪಡೆದಿರೋ ಸಿಸಿಬಿ ಪೊಲೀಸರು ಇನ್ನಷ್ಟು ರೌಡಿಶೀಟರ್ ಗಳಿಗೆ ಕಡಿವಾಣ ಹಾಕುವುದು ಹೇಗೆ ಎಂಬುದರ ಬಗ್ಗೆ ಪ್ಲಾನ್ ಮಾಡುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


