ಮಂಗಳೂರು: ಚಿನ್ನ, ಹಣ, ಮೊಬೈಲ್ ಮೊದಲಾದ ಬೆಲೆಬಾಳುವ ವಸ್ತುಗಳನ್ನು ಕದಿಯೋದನ್ನು ಕೇಳಿದ್ದೇವೆ. ಆದ್ರೆ ಇದೀಗ ಮಂಗಳೂರಿನಲ್ಲಿ ಖತರ್ನಾಕ್ ಕಳ್ಳನೊಬ್ಬ ಉಪ್ಪಿನಕಾಯಿ ಕದ್ದು ಸಿಕ್ಕಿ ಬಿದ್ದಿದ್ದಾನೆ.ಉಪ್ಪಿನಕಾಯಿ ಕದಿಯುತ್ತಿರೋ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಸಿಸಿಟಿವಿಯಲ್ಲೇನಿದೆ?:
ಮಂಗಳೂರು ನಗರದಲ್ಲಿರೋ ಬೇಕರಿಗೆ ವ್ಯಕ್ತಿಯೊಬ್ಬ ಗ್ರಾಹಕನ ಸೋಗಿನಲ್ಲಿ ಅಂಗಡಿಗೆ ಬಂದಿದ್ದಾನೆ. ಬಳಿಕ ಅಂಗಡಿಯವನಲ್ಲಿ ಅದು-ಇದು ಅಂತಾ ತಿಂಡಿ ತಿನಿಸುಗಳ ರೇಟ್ ಕೇಳಿದ್ದಾನೆ. ಬೇಕರಿಯವನು ಬ್ಯುಸಿ ಇದ್ದು, ಅತ್ತಿಂದಿತ್ತ ಓಡಾಡುತ್ತಿದ್ದ ಸಂದರ್ಭದಲ್ಲಿ ಆತನ ಕಣ್ತಪ್ಪಿಸಿ ಉಪ್ಪಿನಕಾಯಿಯ ಒಂದು ಡಬ್ಬವನ್ನು ಅಲ್ಲಿಂದ ಎಗರಿಸಿ, ಆ ಕಡೆ-ಈ ಕಡೆ ನೋಡಿ ಕಿಸೆಯಿಂದ ಹಣ ಕೊಡುವಂತೆ ನಟನೆ ಮಾಡುತ್ತಾನೆ. ಬೇಕರಿಯವನು ಕೂಡ ಈತನನ್ನು ಗಮನಿಸುವುದಿಲ್ಲ. ಹೀಗಾಗಿ ಕಳ್ಳ ತಾನು ಕದ್ದ ಮಾಲನ್ನು ಹಿಡಿದುಕೊಂಡು ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ.ಸದ್ಯ ಕೈಚಳಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಉಪ್ಪಿನಕಾಯಿಯನ್ನೂ ಬಿಡಲ್ವಲ್ಲ ಅಂತ ತಮಾಷೆ ಮಾಡುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://www.youtube.com/watch?v=GvFAxi598cM&feature=youtu.beSign in to your account
Username or Email Address


Password

 Remember Me


