ಮಂಗಳೂರು: ಡೆಂಟಲ್ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ.ನೇಹಾ ಎ. ಥಾಮಸ್(22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಡಿಎಸ್ ಓದುತ್ತಿದ್ದ ನೇಹಾ, ಬುಧವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೇರಳ ಮೂಲದ ನೇಹಾ ವಿದ್ಯಾಭ್ಯಾಸಕ್ಕಾಗಿ ಸುಳ್ಯಕ್ಕೆ ಬಂದಿದ್ದು, ಕಾಲೇಜು ಬಳಿಯಿರುವ ಕಾವೇರಿ ಆರ್ಕೆಡ್ ಸಮೀಪದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು.ಈ ಘಟನೆಯ ಬಗ್ಗೆ ಸ್ನೇಹಿತೆಯೊಬ್ಬಳು ಪ್ರತಿಕ್ರಿಯಿಸಿದ್ದು, ಎಂದಿನಂತೆ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ನೇಹಾ ತನ್ನ ಸ್ನೇಹಿತರ ಜೊತೆಗೆ ಮನೆಗೆ ಹಿಂದಿರುಗಿದ್ದಳು. ಸ್ವಲ್ಪ ಸಮಯದ ಬಳಿಕ ನೇಹಾಳಿಗೆ ಫೋನ್ ಕರೆಯೊಂದು ಬಂದಿದೆ. ಈ ವೇಳೆ ಆಕೆ ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದಳು. ಕೆಲವೊಂದು ಬಾರಿ ಆಕೆ ಫೋನಿನಲ್ಲಿ ಜಗಳವಾಡುತ್ತಿರುತ್ತಿದ್ದಳು. ಹೀಗಾಗಿ ಇದನ್ನು ಕೇಳಿಯೂ ನಾನು ಫ್ರೆಶ್ ಆಗೋಕೆ ಅಂತ ನನ್ನ ರೂಮೊಳಗೆ ಹೋಗಿ ಸ್ವಲ್ಪ ಹೊತ್ತು ನಿದ್ದೆ ಮಾಡಿದೆ. ಬಳಿಕ ಸಂಜೆ 6 ಗಂಟೆ ಸುಮಾರಿಗೆ ಎದ್ದು, ನೇಹಾ ರೂಮಿಗೆ ತೆರಳಿ ಕರೆದಾಗ ಆಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಗಾಬರಿಗೊಂಡು ಆಕೆಯ ಮನೆಯ ಕಿಟಕಿಯಿಂದ ಒಳಗೆ ನೋಡಿದಾಗ ನೇಹಾ ನೇಣಿಗೆ ಶರಣಾಗಿದ್ದಳು. ಭಯಗೊಂಡು ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದೆವು. ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಹರಸಾಹಸಪಟ್ಟು ರೂಮಿನ ಬಾಗಿಲು ಒಡೆದ್ರು. ಒಳಗೆ ಹೋಗಿ ನೋಡಿದಾಗ ನೇಹಾ ಅದಾಗಲೇ ಮೃತಪಟ್ಟಿದ್ದಳು. ನಂತ್ರ ಸುಳ್ಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು ಎಂದು ತಿಳಿಸಿದ್ದಾಳೆ.ಆದ್ರೆ ಆತ್ಮಹತ್ಯೆಗೆ ಕಾರಣವೇನೆಂದು ಇನ್ನಷ್ಟೆ ತಿಳಿದುಬರಬೇಕಿದೆ. ಸದ್ಯ ನೇಹಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಈಕೆಯ ಹೆತ್ತವರು ದುಬೈನಲ್ಲಿದ್ದು, ಅಣ್ಣ ಕೇರಳದ ಕೊಟ್ಟಾಯಂನಲ್ಲಿ ವಾಸವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


