ಬೆಳಗಾವಿ: ಪಾಸ್ ಇರುವ ವಿದ್ಯಾರ್ಥಿಗಳನ್ನು ಹತ್ತಿಸದೇ ಸತಾಯಿಸುತ್ತಿದ್ದ ಸರ್ಕಾರಿ ಬಸ್ ಕಂಡಕ್ಟರ್ ಗೆ  ಖಾನಪುರದ ಎಂಎಲ್‍ಎ ಅಂಜಲಿ ನಿಂಬಾಳ್ಕರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಘಟನೆ ಖಾನಾಪುರದ ಬಳಿ ನಡೆದಿದ್ದು, ಬಸ್ ಪಾಸ್ ಇರೋ ವಿದ್ಯಾರ್ಥಿಗಳು ಹತ್ತಿದರೆ ರಷ್ ಆಗುತ್ತೆ. ರಷ್ ಆದರೆ ಬೇರೆ ಪ್ರಯಾಣಿಕರನ್ನು ಹತ್ತಿಸೋಕೆ ಆಗುವುದಿಲ್ಲ. ಬೇರೆ ಪ್ರಯಾಣಿಕರು ಹತ್ತದೆ ಇದ್ದರೆ ಹಣ ಬರುವುದಿಲ್ಲ ಎಂದು ಹೇಳಿ ವಿದ್ಯಾರ್ಥಿಗಳನ್ನು ಬಸ್ ಹತ್ತಿಸದೇ ಕಂಡಕ್ಟರ್ ಸತ್ತಾಯಿಸುತ್ತಿದ್ದರು.ಇದೇ ವೇಳೆ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೆ ಖಾಲಿ ಹೋಗುತ್ತಿದ್ದ ಮೂರು ಬಸ್ಸುಗಳನ್ನು ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಹಿಂಬಾಲಿಸಿದ್ದಾರೆ. ಬಸ್ ಖಾಲಿ ಇದ್ದರೂ ವಿದ್ಯಾರ್ಥಿಗಳನ್ನ ಯಾಕೆ ಹತ್ತಿಸಿಲ್ಲ. ವಿದ್ಯಾರ್ಥಿಗಳು ಬಸ್ ಹತ್ತಿದರೆ ಕಷ್ಟ ಆಗುತ್ತೆ ಅಂತ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.ಇನ್ನೊಮ್ಮೆ ಈ ರೀತಿ ಪ್ರಕರಣ ನಡೆದರೆ ನಿಮ್ಮನ್ನು ಸೇವೆಯಿಂದ ಅಮಾನತು ಮಾಡಿಸುತ್ತೇನೆ ಎಂದು ಡ್ರೈವರ್ ಹಾಗೂ ಕಂಡಕ್ಟರ್ ಎಚ್ಚರಿಕೆ ನೀಡಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://www.youtube.com/watch?v=JVfCbmWNqpQSign in to your account
Username or Email Address


Password

 Remember Me


