ಮಂಡ್ಯ: ಬಹುತೇಕ ಅಂಬರೀಶ್ ಅವರಿಗೆ ವಯಸ್ಸಾದಂತೆ ಕಾಣುತ್ತಿಲ್ಲ ಅಂತ ಮಂಡ್ಯದ ಗಂಡು ಅಂಬಿ ಬಗ್ಗೆ ನಗುತ್ತಾ ಸಚಿವ ಸಿಎಸ್ ಪುಟ್ಟರಾಜು ಅವರು ತಮಾಷೆ ಮಾಡಿದ್ದಾರೆ.ಮಂಡ್ಯದ ಸಿದ್ದಾರ್ಥ ಚಿತ್ರಮಂದಿರದಲ್ಲಿ ಇಂದು ಅಂಬಿ ನಿಂಗೆ ವಯಸ್ಸಾಯ್ತು ಸಿನೆಮಾ ಬಿಡುಗಡೆಯಾಗಿದೆ. ಚಿತ್ರಮಂದಿರದ ಬಳಿ ಅಂಬಿ ಅಭಿಮಾನಿ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು. ಈ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಅಂಬಿಯನ್ನು ಹೊಗಳಿದ್ದಾರೆ.ಅಂಬರೀಶಣ್ಣ ಅವರಿಗೆ ನಾನು ಪಕ್ಕಾ ಅಭಿಮಾನಿಯಾಗಿದ್ದೇನೆ. ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ರಿಲೀಸ್ ಆಗಿದೆ. ಬಹುತೇಕ ಅಬರೀಶ್ ಅವರಿಗೆ ವಯಸ್ಸಾದಂತೆ ಕಾಣುತ್ತಿಲ್ಲ ಅಂತ ನಗುತ್ತಾ ತಮಾಷೆಯಾಡಿದ್ರು. ಹಾಗೆಯೇ ಸಿನೆಮಾ ಯಶಸ್ಸಾಗಲಿ ಎಂದು ಹಾರೈಸುತ್ತೇನೆ ಅಂತ ಹೇಳಿ ಸಂತಸ ವ್ಯಕ್ತಪಡಿಸಿದ್ರು.ಕಳೆದ ಮೂರು ದಿನಗಳ ಹಿಂದೆ ಕೆಆರ್‍ಎಸ್ ಸುತ್ತಮುತ್ತ ಕೇಳಿಬಂದ ಭಾರೀ ಶಬ್ದದ ಬಗ್ಗೆ ಪ್ರತಿಕ್ರಿಯಿಸಿ, ಮಂಡ್ಯ ಜಿಲ್ಲೆಯ ಜೀವನಾಡಿ ಕೆಆರ್‍ಎಸ್ ಅಣೆಕಟ್ಟೆಯ ಸುತ್ತಮುತ್ತ 20 ಕಿಲೋಮೀಟರ್ ಸುತ್ತಳತೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಹೇಳಿದ್ರು.ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ವರದಿ ನೋಡಿದ್ದೇನೆ. ವರದಿಯಲ್ಲಿ ಕೆಆರ್‍ಎಸ್ ಡ್ಯಾಂ ಸುರಕ್ಷತೆಗಾಗಿ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲು ಸಲಹೆ ನೀಡಿದೆ. ಆದ್ದರಿಂದ ಕೆ.ಆರ್.ಎಸ್ ಡ್ಯಾಂ ನ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲು ಕ್ರಮ ಕೈಗೊಂಡು, ಡ್ಯಾಂ ನ 20 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯದಂತೆ 144 ಸೆಕ್ಷನ್ ಜಾರಿಗೊಳಿಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು, ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ವರದಿ ನೀಡಿ ಕ್ರಮಕ್ಕೆ ತಿಳಿಸಿದ್ದೇನೆ ಅಂದ್ರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv Sign in to your account
Username or Email Address


Password

 Remember Me


