ತುಮಕೂರು: ವಿವಾಹಿತ ಮಹಿಳೆಯೊಬ್ಬಳು ತನ್ನ ಪತಿ ಹಾಗೂ ಮಗನನ್ನು ಬಿಟ್ಟು ಪ್ರೀತಿಸಿದ ಅಣ್ಣನ ಜೊತೆ ಓಡಿಹೋಗಿರುವ ವಿಚಿತ್ರ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಭೀಮನಕುಂಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಮಮತಾ ಅಣ್ಣನನ್ನೇ ಪ್ರೀತಿಸಿ ಮನೆಬಿಟ್ಟು ಓಡಿ ಹೋದ ವಿವಾಹಿತ ಮಹಿಳೆ. ಮಮತಾ ತನ್ನ ಚಿಕ್ಕಮ್ಮನ ಮಗನಾದ ವೆಂಕಟೇಶ್ ನನ್ನು ಪ್ರೀತಿಸಿದ್ದು, ಈಗ ಪತಿ ರಮೇಶ್ ನನ್ನು ಬಿಟ್ಟು ಅಣ್ಣ ವೆಂಕಟೇಶ್ ಜೊತೆ ಓಡಿ ಹೋಗಿದ್ದಾಳೆ.ಮಮತಾಗೆ ರಮೇಶ್ ಜೊತೆ 10 ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ದಂಪತಿಗೆ 8 ವರ್ಷದ ಮಗನೂ ಇದ್ದಾನೆ. ವೆಂಕಟೇಶ್ ಅದೇ ಗ್ರಾಮದವನಾಗಿದ್ದು, ಆತನಿಗೂ ಮದುವೆಯಾಗಿತ್ತು. ವೆಂಕಟೇಶ್ ಪದೇ ಪದೇ ಮಮತಾ ಮನೆಗೆ ಬರುತ್ತಿದ್ದನು. ಆಗ ಇಬ್ಬರಿಬ್ಬರ ನಡುವೆ ಪ್ರೀತಿಯಾಗಿದೆ.ಸುಮಾರು ನಾಲ್ಕು ವರ್ಷಗಳಿಂದ ಇವರಿಬ್ಬರ ನಡುವೆ ಅನೈತಿಕ ಸಂಬಂಧ ಇತ್ತು. ಅನೇಕ ಬಾರಿ ಇವರಿಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆಗ ಇವರಿಬ್ಬರ ವಿಚಾರ ಮನೆಯವರಿಗೆ ತಿಳಿದಿದ್ದು, ಕುಟುಂಬಸ್ಥರು ಬುದ್ಧಿ ಹೇಳಿದ್ದರು. ಆದರೆ ಇವರು ಮನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳದೇ ಇದೇ ತಿಂಗಳ 6 ರಂದು ವೆಂಕಟೇಶ್ ಮತ್ತು ಮಮತಾ ಇಬ್ಬರು ಮನೆ ಬಿಟ್ಟು ಓಡಿ ಹೋಗಿದ್ದಾರೆ.ಈ ಕುರಿತು ಪತಿ ಮತ್ತು ಸಂಬಂಧಿಕರು ಪಾವಗಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಮಮತಾಳಿಗಾಗಿ ಮಗ ಮತ್ತು ಪತಿ ರಮೇಶ್ ಇಬ್ಬರು ಕಾಯುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


