ಬೆಂಗಳೂರು: ಇತ್ತೀಚೆಗಷ್ಟೆ ಅದ್ಧೂರಿಯಾಗಿ ಸೀಮಂತ ಮಾಡಿಸಿಕೊಂಡಿದ್ದ ಬಹುಭಾಷಾ ನಟಿ ರಂಭಾ ಅವರು ತಮ್ಮ ಮೂರನೇ ಮಗುವಿನ ಜನ್ಮ ನೀಡಿದ್ದಾರೆ.ಈ ಬಗ್ಗೆ ಸ್ವತಃ ರಂಭಾ ಅವರೇ ತಮ್ಮ ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ‘BABY BOY’ ಎಂದು ಫೋಟೋ ಹಾಕಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 23ರಂದು ಟೊರೊಂಟೊದಲ್ಲಿರುವ ಮೌಂಟ್ ಸಿನೈ ಆಸ್ಪತ್ರೆಯಲ್ಲಿ ನಾನು ಗಂಡು ಮಗುವಿಗೆ ಜನ್ಮ ನೀಡಿದ್ದೇನೆ. ನಾನು ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನ ಸೀಮಂತದಲ್ಲಿ ಖುಷಿಯಾಗಿ ಕುಣಿದು ಕುಪ್ಪಳಿಸಿದ ನಟಿ ರಂಭಾ- ಫೋಟೋ ವೈರಲ್!ರಂಭಾ ಉದ್ಯಮಿ ಇಂದ್ರಕುಮಾರ್ ಪತ್ಮನಾಥನ್ ಅವರನ್ನು 2010ರಲ್ಲಿ ಮದುವೆಯಾಗಿದ್ದರು. ಈಗಾಗಲೇ ಅವರಿಗೆ ಲಾನ್ಯ ಹಾಗೂ ಸಾಶಾ ಹೆಣ್ಣು ಮಕ್ಕಳಿದ್ದು, ಈಗ ಮೂರನೇ ಮಗುವಾಗಿ ಜನ್ಮ ನೀಡಿದ್ದಾರೆ. ಸದ್ಯ ರಂಭಾ ತನ್ನ ಪತಿ ಹಾಗೂ ಮಕ್ಕಳ ಜೊತೆ ಕೆನಡಾದಲ್ಲಿ ವಾಸಿಸುತ್ತಿದ್ದಾರೆ.ಕೆನಡಾದಲ್ಲಿರುವ ನಿವಾಸದಲ್ಲಿ ರಂಭಾ ಅವರು ಸೀಮಂತ ಕಾರ್ಯಕ್ರಮ ಭಾರತೀಯ ಸಂಪ್ರದಾಯದಂತೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅವರ ಪತಿ ಇಂದ್ರಕುಮಾರ್, ಲಾನ್ಯ ಹಾಗೂ ಸಾಶಾ ಕೂಡ ಭಾಗಿಯಾಗಿದ್ದರು. ರಂಭಾ ತುಂಬು ಗರ್ಭಿಣಿಯಾಗಿದ್ದರೂ, ತನ್ನ ಸೀಮಂತದ ಕಾರ್ಯಕ್ರಮದಲ್ಲಿ ಸಂಬಂಧಿಕರ ಜೊತೆ ಡ್ಯಾನ್ಸ್ ಮಾಡಿದ್ದರು.ತೆಲುಗು, ತಮಿಳು ಚಿತ್ರದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ರಂಭಾ ಸಾಕಷ್ಟು ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. `ಸರ್ವರ್ ಸೋಮಣ್ಣ'(ಜಗ್ಗೇಶ್ ನಾಯಕ) ಸಿನಿಮಾದ ಮೂಲಕ ರಂಭಾ ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ರವಿಚಂದ್ರನ್ ಅಭಿನಯದ ‘ಪಾಂಡುರಂಗ ವಿಠಲ’, ‘ಸಾಹುಕಾರ’ ಸಿನಿಮಾದಲ್ಲಿ ಅಭಿನಯಿಸಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


