ಬೆಂಗಳೂರು: ಮನೆ ಮಾಲೀಕ ತೆಗೆದುಕೊಂಡ ಸಾಲ ಕಟ್ಟದ್ದಕ್ಕೆ ಬ್ಯಾಂಕ್‍ನವರು ಬಾಡಿಗೆದಾರರ ಮನೆಗೂ ಬೀಗ ಹಾಕಿರುವ ಅಮಾನವೀಯ ಘಟನೆ ಬಾಗಲಗುಂಟೆಯಲ್ಲಿ ನಡೆದಿದೆ.ಮನೆ ಮಾಲೀಕ ಕೇಶವ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಮನೆ ಮಾಲೀಕ ಕೇಶವ್ ಬ್ಯಾಂಕ್ ಸಾಲ ಮಾಡಿದ್ದಕ್ಕೆ ಕೋರ್ಟ್ ಆದೇಶದಂತೆ ಮಲ್ಲೇಶ್ವರಂ ಸೊಸೈಟಿ ಬ್ಯಾಂಕ್ ಮಂಗಳವಾರ ಮಧ್ಯಾಹ್ನ ಎಲ್ಲ 15 ಮನೆಗಳಿಗೂ ಬೀಗ ಹಾಕಿ ಮನೆಯವರನ್ನು ಹೊರಹಾಕಿದ್ದಾರೆ. ಇದರಿಂದಾಗಿ ಬಾಡಿಗೆದಾರರು ಪರದಾಡುವ ಸ್ಥಿತಿ ಎದುರಾಗಿದೆ.ಬಾಡಿಗೆದಾರರ ಪೈಕಿ ಎರಡು ದಿನಗಳ ಹಿಂದೆ ಕಂದಮ್ಮ ಐಸಿಯುನಿಂದ ಡಿಸ್ಚಾರ್ಜ್ ಆಗಿತ್ತು, ಈಗ ಬಾಣಂತಿ ಪರದಾಡುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಊಟ ತಿಂಡಿಯಿಲ್ಲದೇ 30ಕ್ಕೂ ಹೆಚ್ಚು ಮಂದಿ ಬಳಲುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳು, ವಯಸ್ಸಾದವರು ನಿನ್ನೆ ರಾತ್ರಿಯಿಂದ ಪರದಾಡುತ್ತಿದ್ದಾರೆ. ಮನೆಗೆ ಬೀಗ ಹಾಕಿರುವುದರಿಂದ ಬಾಡಿಗೆದಾರರ ಬದುಕು ಬೀದಿಗೆ ಬಂದಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


