ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ನಟ ದುನಿಯಾ ವಿಜಯ್ ಜೈಲು ಸೇರಿದ್ರೆ ಇತ್ತ, ಪಾನಿಪುರಿ ಕಿಟ್ಟಿಗೆ ಸಂಕಷ್ಟ ಎದುರಾಗಿದೆ.ಪಾನಿಪುರಿ ಕಿಟ್ಟಿ ಪೊಲೀಸರ ಎದುರಲ್ಲೇ ದುನಿಯಾ ವಿಜಯ್ ಮೂಗಿಗೆ ಡಿಚ್ಚಿ ಹೊಡೆದಿದ್ದಾರೆ. ಈ ಬಗ್ಗೆ ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಪಾನಿಪುರಿ ಕಿಟ್ಟಿ ಪೊಲೀಸರ ಎದುರಲ್ಲೇ ವಿಜಿಗೆ ಡಿಚ್ಚಿ ಹೊಡೆದಿದ್ದಾನೆ. ಅಲ್ಲದೇ ನಾನು ವಿಜಿಗೆ ಡಿಚ್ಚಿ ಹೊಡೆದೆ ಅಂತಾ ಹೇಳ್ಕೊಂಡು ತಿರುಗಾಡ್ತಿದ್ದಾನೆ. ಹೀಗಾಗಿ ಪಾನಿಪುರಿ ಕಿಟ್ಟಿ ಮೇಲೆ ಕ್ರಮ ಕೈಗೊಳ್ಳುವಂತೆ ಕುರುಬರ ಪಡೆ ರಾಜ್ಯಾಧ್ಯಕ್ಷ ವರ್ತೂರು ಸತೀಶ್ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.ಸಾಮಾನ್ಯ ಜನ ಡಿಚ್ಚಿ ಹೊಡೆಯೋದಕ್ಕೂ, ಬಾಡಿ ಬಿಲ್ಡರ್ ಡಿಚ್ಚಿ ಹೊಡೆಯೋದಕ್ಕೂ ವ್ಯತ್ಯಾಸವಿದೆ. ಬಾಡಿ ಬಿಲ್ಡರ್ ಡಿಚ್ಚಿ ಹೊಡೆದ್ರೆ ಪ್ರಾಣವೇ ಹೋಗುತ್ತೆ. ಹೀಗಾಗಿ ಪೊಲೀಸರ ಎದುರು ಡಿಚ್ಚಿ ಹೊಡೆದ ಪಾನಿಪುರಿ ಕಿಟ್ಟಿ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://www.youtube.com/watch?v=CXoYbpWrkoUhttps://www.youtube.com/watch?v=caVQhLAJWTsSign in to your account
Username or Email Address


Password

 Remember Me


