ಬಳ್ಳಾರಿ: ಸೋಮವಾರ ಸುರಿದ ಧಾರಾಕಾರ ಮಳೆಗೆ ಬಳ್ಳಾರಿಯ ಗಡಿ ಭಾಗದ ಸೇತುವೆ ಮೇಲಿಂದ ಬಸ್ ಪಲ್ಟಿಯಾಗಿ ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.ಸೋಮವಾರ ಆದೋನಿ- ಸಿರಗುಪ್ಪ ಅಂತರಾಜ್ಯ ಹೆದ್ದಾರಿ ಬಳಿಯ ರಾರಾವಿ ಗ್ರಾಮದ ಹಿರೇಹಳ್ಳದ ಸೇತುವೆ ದಾಟಲು ಮುಂದಾದ ಬಸ್ ಕಂಟ್ರೋಲ್ ತಪ್ಪಿ ಹಳ್ಳದಲ್ಲಿ ಉರುಳಿದೆ. ರಭಸವಾಗಿ ಹರಿಯುತ್ತಿದ್ದ ಸೇತುವೆಯ ಮೇಲೆ ಬಸ್ ಉರುಳುತ್ತಿದ್ದಂತೆ ಸ್ಥಳೀಯರು ಹಾಗೂ ಬಸ್‍ನಲ್ಲಿದ್ದ ಪ್ರಯಾಣಿಕರು ಎಲ್ಲರನ್ನೂ ರಕ್ಷಣೆ ಮಾಡುವಲ್ಲಿ ಯಶ್ವಸಿಯಾಗಿದ್ದಾರೆ.ಆಂಧ್ರಪ್ರದೇಶದ ಎಪಿಎಸ್‍ಆರ್ ಟಿಸಿ ಬಸ್ ಆಂದೋನಿಯಿಂದ ಸಿರಗುಪ್ಪ ಕಡೆಗೆ ಬರುತ್ತಿತ್ತು. ಬಸ್ ಸೇತುವೆಯ ಮೇಲೆ ಉರುಳುತ್ತಿದ್ದಂತೆ ಬಸ್‍ನಲ್ಲಿದ್ದ 50 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಸದ್ಯ ಬಸ್ ಚಾಲಕನ ನಿರ್ಲಕ್ಷದಿಂದಲೇ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಕೆಲ ಪ್ರಯಾಣಿಕರಿಗೆ ಸಣ್ಣ ಪುಟ್ಟಗಳ ಗಾಯವಾಗಿದೆ. ಅದರ ಹೊರತಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


