ಬೆಂಗಳೂರು: ರೌಡಿಶೀಟರ್ ನನ್ನು ಬೆತ್ತಲೆಗೊಳಿಸಿ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಮಾಡಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ರೌಡಿಶೀಟರ್ ದಿಲೀಪ್ ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಲಾಗಿದೆ. ಬ್ಯಾಡರಹಳ್ಳಿ ಪೊಲೀಸರು ಬಟ್ಟೆ ಬಚ್ಚಿ ರೌಡಿಶೀಟರ್ ಗೆ ಈ ರೀತಿ ಟ್ರಿಂಟ್ ಮೆಂಟ್ ಮಾಡಿ ತಮ್ಮ ವಿಕೃತಿ ಮೆರೆದಿದ್ದಾರಾ ಎಂಬ ಪ್ರಶ್ನೆಗಳು ಕೇಳಿ ಬರುತ್ತಿದೆ.ಸೆಪ್ಟೆಂಬರ್ 3 ರಂದು ದಿಲೀಪ್ ಸಹೋದರ ಸ್ಕೋಪಿ ಕೊಲೆಯಾಗಿದ್ದನು. ವಿಶ್ವೇಶ್ವರಯ್ಯ ಲೇಔಟ್ ಬಳಿ ಸ್ಕೋಪಿ ಕೊಲೆಯಾಗಿತ್ತು. ತನ್ನ ಸಹೋದರನ್ನು ಕೊಲೆ ಮಾಡಿದ್ದ ದುರ್ಷ್ಕಮಿಗಳ ಮೇಲೆ ಪತ್ರಿಕಾರ ತೀರಿಸಿಕೊಳ್ಳಲು ದಿಲೀಪ್ ಸಿದ್ಧನಾಗಿದ್ದನು. ಅದೇ ರೀತಿ ಸ್ಕೆಚ್ ಕೂಡ ಹಾಕಿದ್ದು, ಇದನ್ನು ಅರಿತ ಪೊಲೀಸರು ಠಾಣೆಗೆ ಕರೆತಂದಿದ್ದರು.ವಿಡಿಯೋದಲ್ಲಿ ಆರೋಪಿ ದಿಲೀಪ್ ನನ್ನು ಬೆತ್ತಲೆಗೊಳಿಸಿ, ಹಿಂದೆಯಿಂದ ಅಂದರೆ ಮುಖಕಾಣದಂಗೆ ನಿಂತುಕೊಂಡು ಹಲ್ಲೆ ಮಾಡಿದ್ದಾರೆ. ಮುಂದೆ ಹಲ್ಲೆ ಮಾಡುತ್ತಿರುದನ್ನು ವಿಡಿಯೋ ಮಾಡಿದ್ದಾರೆ. ಆದರೆ ಹಲ್ಲೆ ಮಾಡಿದವರು, ವಿಡಿಯೋ ಮಾಡುತ್ತಿರುವವರು ಯಾರು ಎಂದು ತಿಳಿದುಬಂದಿಲ್ಲ. ಆದರೆ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಯ ನೆಪದಲ್ಲಿ ವಿಕೃತಿ ಮೆರೆತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


