ಕೋಲಾರ: ಕೆಎಸ್ ಆರ್ ಟಿಸಿ ಬಸ್ ನ ಹಿಂದಿನ ಚಕ್ರಕ್ಕೆ ತಲೆಕೊಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಭಯಾನಕ ಘಟನೆಯೊಂದು ಕೋಲಾರ ನಗರದ ಸಂತೆ ಗೇಟ್ ಬಳಿ ನಡೆದಿದೆ.ತಮಿಳುನಾಡು ಮೂಲದ ಕಣ್ಣನ್ (35) ಮೃತ ವ್ಯಕ್ತಿ. ಇವರು ನಗರದ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ. ಸದ್ಯ ಕಣ್ಣನ್ ಆತ್ಮಹತ್ಯೆಗೆ ಶರಣಾಗಿರುವ ಭಯಾನಕ ದೃಶ್ಯ ಸ್ಥಳದಲ್ಲಿರುವ ಪಾಪುಲರ್ ಫರ್ನಿಚರ್ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.ಬಸ್ ಸಂಚರಿಸುತ್ತಿರುವಾಗಲೇ ಕಣ್ಣನ್ ಅವರು ಏಕಾಏಕಿ ಬಸ್ಸಿನ ಹಿಂದಿನ ಚಕ್ರದಡಿ ತಲೆಕೊಟ್ಟಿದ್ದಾರೆ. ಪರಿಣಾಮ ಬಸ್ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದ್ರೆ ಕಣ್ಣನ್ ಅವರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿಲ್ಲ.ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


