ಮಂಗಳೂರು: ಬೆಳಂಬೆಳಗ್ಗೆ ಮೂಡಬಿದ್ರೆಯಲ್ಲಿ ತಲ್ವಾರ್ ದಾಳಿ ನಡೆಸಿ ನೆತ್ತರು ಹರಿಸಿದ ಬೆನಲ್ಲೇ ಪ್ರತಿಕಾರವಾಗಿ ಮತ್ತೊಂದು ತಲ್ವಾರ್ ದಾಳಿ ನಡೆದಿದೆ.ಕೈಕಂಬದ ಸೂರಲ್ಪಾಡಿಯಲ್ಲಿ ಸಂಜೆ ವೇಳೆ ಪೊಳಲಿ ನಿವಾಸಿ ಹರೀಶ್ ಶೆಟ್ಟಿ (38) ಮೇಲೆ ತಲ್ವಾರ್ ನಿಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹರೀಶ್ ಶೆಟ್ಟಿ, ಕೈಕಂಬದಲ್ಲಿ ಬಸ್ ಟೈಂ ಕೀಪರ್ ಆಗಿದ್ದ ಕೆಲಸ ಮಾಡುತ್ತಿದ್ದರು. ಸದ್ಯ ದಾಳಿಯಲ್ಲಿ ಗಾಯಗೊಂಡಿರುವ ಹರೀಶ್ ಶೆಟ್ಟಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಸ್ಪತ್ರೆಗೆ ಪೊಲೀಸ್ ಕಮೀಷನರ್ ಟಿ.ಆರ್ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇಂದು ಬೆಳಗ್ಗೆ ಮೂಡುಬಿದ್ರೆಯ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಇಮ್ತಿಯಾಜ್ ಎಂಬಾತನನ್ನು ಕೊಲೆ ಮಾಡಲು ಯತ್ನಿಸಲಾಗಿತ್ತು. ಈ ವೇಳೆ ಇಮ್ತಿಯಾಜ್ ತಲೆ ಹಾಗೂ ಕಾಲಿಗೆ ತಲ್ವಾರ್ ನಿಂದ ಹಲ್ಲೆ ನಡೆಸಲಾಗಿತ್ತು. ಘಟನೆಯಲ್ಲಿ ತೀವ್ರ ಪ್ರಮಾಣದಲ್ಲಿ ಗಾಯಗೊಂಡಿದ್ದ ಇಮ್ತಿಯಾಜ್‍ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಮ್ತಿಯಾಜ್ ಮೇಲಿನ ಹಲ್ಲೆಯ ಪ್ರತಿಕಾರವಾಗಿ ಸಂಜೆ ವೇಳೆಗೆ ಹರೀಶ್ ಶೆಟ್ಟಿ ಮೇಲೆ ತಲವಾರ್ ದಾಳಿ ನಡೆಸಲಾಗಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


