ಬೆಂಗಳೂರು: ನಟಿ ರಾಧಿಕಾ ಅವರು ಗರ್ಭಿಣಿಯಾಗಿದ್ದು, ತಮ್ಮ ಸಿನಿಮಾದ ಡಬ್ಬಿಂಗ್ ಕೆಲಸವನ್ನು ಮಾಡಿದ್ದಾರೆ. ಡಬ್ಬಿಂಗ್ ಮಾಡುವುದರ ಜೊತೆ ಅಭಿಮಾನಿಗಳಿಗೆ ಒಂದು ಪ್ರಶ್ನೆಯನ್ನು ಕೂಡ ಕೇಳಿದ್ದಾರೆ.ರಾಧಿಕಾ ಅವರು ಮದುವೆಯಾದ ನಂತರ ಸಿನಿಮಾವನ್ನು ಮಾಡಿಲ್ಲ. ಆದರೆ ಇತ್ತೀಚೆಗೆ ರಾಧಿಕಾ ಅವರು, ರಂಗಿತರಂಗ ಸಿನಿಮಾದ ನಟ ನಿರೂಪ್ ಭಂಡಾರಿ ಜೊತೆ ಮೊದಲ ಬಾರಿಗೆ ಅಭಿನಯಿಸುವುದರ ಮೂಲಕ ತಮ್ಮ ಸಿನಿಮಾ ಪ್ರಯಾಣವನ್ನು ಮತ್ತೆ ಆರಂಭಿಸಿದ್ದಾರೆ. ರಾಧಿಕಾ ಮತ್ತು ನಿರೂಪ್ ಭಂಡಾರಿ ಒಟ್ಟಿಗೆ ‘ಆದಿ ಲಕ್ಷ್ಮಿ ಪುರಾಣ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.ಈ ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಡಬ್ಬಿಂಗ್ ಕೆಲಸ ಮಾತ್ರ ಉಳಿದಿತ್ತು. ಈಗ ರಾಧಿಕಾ ಅವರು ‘ಆದಿ ಲಕ್ಷ್ಮಿ ಪುರಾಣ’ ಸಿನಿಮಾದ ಡಬ್ಬಿಂಗ್ ಮಾಡಿದ್ದಾರೆ. ಡಬ್ಬಿಂಗ್ ಮಾಡುವಾಗ ಫೋಟೋ ತೆಗೆದುಕೊಂಡು ಅದನ್ನು ತಮ್ಮ ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.ಫೋಟೋ ಜೊತೆಗೆ “ಈಗ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಮದುವೆಯ ನಂತರ ನನ್ನ ಮೊದಲ ಸಿನಿಮಾಗೆ ಡಬ್ಬಿಂಗ್ ಮಾಡುತ್ತಿದ್ದೇನೆ. ಈ ಸಮಯದಲ್ಲಿ ಏನು ವ್ಯತ್ಯಾಸವಿದೆ ಗೆಸ್ ಮಾಡಿ” ಎಂದು ಒಂದು ಫನ್ನಿ ಎಮೋಜಿ ಹಾಕಿ ಪೋಸ್ಟ್ ಮಾಡಿದ್ದಾರೆ. ಕೊನೆಯಲ್ಲಿ ‘ಆದಿ ಲಕ್ಷ್ಮಿಪುರಾಣ’ ಸಿನಿಮಾ ಸಿದ್ಧವಾಗಿದೆ ಎಂದು ಹೇಳಿದ್ದಾರೆ.ರಾಧಿಕಾ ಅವರು ಈ ರೀತಿ ಪೋಸ್ಟ್ ಹಾಕಿದ್ದ ತಕ್ಷಣ ಅಭಿಮಾನಿಗಳು ವ್ಯತ್ಯಾಸವನ್ನು ಕಂಡು ಹಿಡಿದು ಕಮೆಂಟ್ ಮಾಡುವ ಮೂಲಕ ಉತ್ತರಿಸಿದ್ದಾರೆ. ಕೆಲವರು ನೀವು ಈಗ ಇಬ್ಬರು ಡಬ್ಬಿಂಗ್ ಮಾಡಿದ್ದೀರಾ ಎಂದು ಮಾಡಿದ್ದಾರೆ. ಇನ್ನು ಕೆಲವರು ಜೂನಿಯರ್ ಯಶ್ ನಿಮಗೆ ಸಾಥ್ ಕೊಟ್ಟಿದ್ದಾರೆ ಎಂದು ಮಾಡಿದ್ದಾರೆ. ಬಳಿಕ ಅಭಿಮಾನಿಗಳು ಈ ಸಮಯದಲ್ಲಿ ನೀವು ರೆಸ್ಟ್ ಮಾಡಿ ಎಂದು ಕಾಳಜಿಯನ್ನ ವ್ಯಕ್ತಪಡಿಸಿದ್ದಾರೆ.ರಾಧಿಕಾ ಮತ್ತು ಯಶ್ ತಮ್ಮ ಮೊದಲನೆ ಮಗುವಿನ ನಿರೀಕ್ಷೆಯಲ್ಲಿದ್ದು, ಇತ್ತೀಚೆಗೆ ಬೇಬಿಮೂನ್ ಗಾಗಿ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ತಮ್ಮ ಬೇಬಿಮೂನ್ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv https://www.instagram.com/p/BoGBUr0gtrO/?hl=en&taken-by=iamradhikapanditSign in to your account
Username or Email Address


Password

 Remember Me


