ಚಿತ್ರದುರ್ಗ: ಬಿ.ಸಿ ಪಾಟೀಲಣ್ಣ ಬಿಜೆಪಿ ಸೇರಣ್ಣ, ಬಿಎಸ್‍ವೈ ಜೊತೆಗಿರಣ್ಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಅಭಿಮಾನಿಗಳು ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಕಾರು ಅಡ್ಡಗಟ್ಟಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ.ಭಾನುವಾರ ರಾತ್ರಿ ಚಿತ್ರದುರ್ಗದ ಸಿರಿಗೆರೆ ಗ್ರಾಮದಲ್ಲಿ ನಡೆದ ತರಳುಬಾಳು ಮಠದ ಶಿವಕುಮಾರ ಶ್ರೀಗಳ 26ನೇ ಶ್ರದ್ಧಾಂಜಲಿ ಸಮಾರಂಭ ಮುಗಿಸಿಕೊಂಡು ಹೊರಟ ಕಾಂಗ್ರೆಸ್‍ನ ಅಸಮಾಧಾನಿತ ಶಾಸಕರೆಂದೇ ಗುರುತಿಸಿಕೊಂಡಿರುವ ಶಾಸಕ ಬಿ.ಸಿ ಪಾಟೀಲ್ ಅವರ ಕಾರನ್ನು ಬಿಎಸ್‍ವೈ ಅಭಿಮಾನಿಗಳು ತಡೆದು ನಿಲ್ಲಿಸಿದ್ದಾರೆ.ಬಿಎಸ್ ವೈ ಅಭಿಮಾನಿಗಳು ಬಿ.ಸಿ ಪಾಟೀಲ್ ಅವರನ್ನು ಬಿಜೆಪಿ ಪಕ್ಷ ಸೇರುವಂತೆ ಬೆನ್ನು ಬಿದ್ದು ಬೇಡಿದರು. ಅಲ್ಲದೇ “ಅಣ್ಣ ಬಿಜೆಪಿ ಸೇರಣ್ಣ. ಯಡಿಯೂರಪ್ಪ ಜೊತೆಗಿರಣ್ಣ ಎಂದು ಹೇಳುತ್ತಾ ‘ಯಡಿಯೂರಪ್ಪಗೆ ಜೈ, ಬಿ.ಸಿ ಪಾಟೀಲ್‍ಗೆ ಜೈ’ ಎಂದು ಘೋಷಣೆ ಕೂಗಿದರು.ಈ ವೇಳೆ ಬಿಜೆಪಿ ಅಭಿಮಾನಿಗಳ ಒತ್ತಾಯದಿಂದ ಕಸಿವಿಸಿಗೊಂಡ ಬಿ.ಸಿ ಪಾಟೀಲ್ ಏನೂ ಮಾತನಾಡದೇ ಕಾರಿನಲ್ಲಿ ತೆರಳಿದರು. ಈ ವೇಳೆ ಶಾಸಕರ ಕಾರನ್ನು ಮುತ್ತಿಕೊಂಡ ಜನರನ್ನು ನಿಭಾಯಿಸಲು ಪೊಲೀಸರು ಹರ ಸಾಹಸಪಡಬೇಕಾಯಿತು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


