ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ನೆತ್ತರು ಹರಿದಿದೆ. ಮೂಡಬಿದ್ರೆಯ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಯ ಕೊಲೆಗೆ ಯತ್ನ ನಡೆದಿದೆ.ಮೂಡಬಿದ್ರೆ ಠಾಣೆ ವ್ಯಾಪ್ತಿಯ ಗಂಟಾಲ್ ಕಟ್ಟೆ ಎಂಬಲ್ಲಿ ಬೆಳಗ್ಗೆ 6.30ಕ್ಕೆ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಇಮ್ತಿಯಾಜ್ (30) ಮೇಲೆ ತಲವಾರಿನಿಂದ ಕಡಿದು ಪರಾರಿಯಾಗಿದೆ.ಇಮ್ತಿಯಾಜ್ ಗಂಟಾಲ್ಕಟ್ಟೆಯಲ್ಲಿ ಹೊಟೇಲ್ ಹೊಂದಿದ್ದು, ಇನ್ನೋವಾದಲ್ಲಿ ಬಂದಿದ್ದ ಯುವಕರು ಬೆಳಗ್ಗೆ ಚಹಾ ಕುಡಿಯಲೆಂದು ಹೊಟೇಲ್ ಒಳಗೆ ಬಂದಿದ್ದರು. ಹೀಗಾಗಿ ಟೀ ಮಾಡಲೆಂದು ಇಮ್ತಿಯಾಜ್ ಒಳ ಹೋದಾಗಲೇ ತಲವಾರಿನೊಂದಿಗೆ ನುಗ್ಗಿದ ತಂಡ, ಆತನ ತಲೆ ಮತ್ತು ಕಾಲಿಗೆ ಕಡಿದು ಪರಾರಿಯಾಗಿದೆ. ಗಂಭೀರವಾಗಿ ಹಲ್ಲೆಗೊಳಗಾದ ಇಮ್ತಿಯಾಜ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇಮ್ತಿಯಾಜ್, ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ. ಹೀಗಾಗಿ ಪ್ರತೀಕಾರಕ್ಕಾಗಿ ಕೊಲೆ ಯತ್ನ ನಡೆದಿರಬಹುದಾ ಎನ್ನುವ ಶಂಕೆ ವ್ಯಕ್ತವಾಗಿದೆ. ಪೊಲೀಸ್ ಕಮಿಷನರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಡಬಿದ್ರೆ ಠಾಣೆ ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದಾರೆ.ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯನ್ನು ಎರಡು ವರ್ಷಗಳ ಹಿಂದೆ ಮೂಡಬಿದ್ರೆ ಪೇಟೆಯಲ್ಲಿ ದುಷ್ಕರ್ಮಿಗಳು ಬೆಳ್ಳಂಬೆಳಗ್ಗೆ ಕಡಿದು ಹತ್ಯೆ ಮಾಡಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸಂಚಲನವನ್ನೂ ಸೃಷ್ಟಿ ಮಾಡಿತ್ತು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


