ಬೆಂಗಳೂರು: ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಹೇ ಜಲಿಲಾ ಹಾಡನ್ನು ನೋಡಿ ಸ್ಯಾಂಡಲ್ ವುಡ್ ನಟಿ ಕನಸಿನ ರಾಣಿ ಮಾಲಾಶ್ರೀ ಅವರು ಟ್ವೀಟ್ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ.”ನಾನು ಈಗ ತಾನೇ ಅಂಬಿ ನಿಂಗ್ ವಯಾಸ್ಸಾಯ್ತೋ ಸಿನಿಮಾದ ಹಾಡನ್ನು ನೋಡಿದೆ. ಈ ಹಾಡು ತುಂಬಾ ವಿಶೇಷವಾಗಿದೆ. ಹಾಡಿನ ಸಾಲುಗಳು ಕ್ಯೂಟ್ ಆಗಿವೆ. ಈ ಹಾಡನ್ನು ನಾನು ತುಂಬಾ ಎಂಜಾಯ್ ಮಾಡಿದೆ. ಅಂಬರೀಷ್ ಅವರ ಬಗ್ಗೆ ಹೇಳುವುದಕ್ಕೆ ಪದಗಳೇ ಸಾಲುವುದಿಲ್ಲ. ಇಡೀ ಸಿನಿ ತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ, ಗುಡ್‍ಲಕ್” ಎಂದು ಮಾಲಾಶ್ರೀ ಅವರು ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.14 ವರ್ಷದ ಬಳಿಕ ರೆಬೆಲ್ ಸ್ಟಾರ್ ಅಂಬರೀಶ್ ಅವರು ಚಂದನವನದಲ್ಲಿ ಮಿಂಚಲು ಬರುತ್ತಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಬಿಡುಗಡೆಯಾದ ಹೇ ಜಲಿಲಾ ಹಾಡಿಗೆ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಅಂಬಿ ಅವರ ಎಂಟ್ರಿಗಾಗಿ ಸ್ಯಾಂಡಲ್‍ವುಡ್ ನಟ ನಟಿಯರು ಕೂಡಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ.ಈ ಸಿನಿಮಾದ ಹಾಡುಗಳಿಗೆ ಪ್ರೇಮ್ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯ್ ಪ್ರಕಾಶ್ ಅವರು ಸಂಗೀತ ಸಂಯೋಜನೆಗೆ ಧ್ವನಿಗೊಡಿಸಿದ್ದಾರೆ. ಈ ಸಿನಿಮಾ ಗುರುದತ್ತ ಗಾಣಿಗ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದು, ಸೆಪ್ಟಂಬರ್ 27 ರಂದು ತೆರೆ ಮೇಲೆ ಮಿಂಚಲು ಸಜ್ಜಾಗಿದೆ. ಇದರಲ್ಲಿ ರೆಬೆಲ್ ಸ್ಟಾರ್ ಅಂಬರೀಷ್, ಕಿಚ್ಚ ಸುದೀಪ್, ಸುಹಾಸಿನಿ, ಶೃತಿ ಹರಿಹರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv I just watched #AmbiNingVayassaytho song.. It is so differently made and the lyrics are so lovely and cute! I really enjoyed!????And Ambareeshji no words????????????Eager to watch!???? All the best and I wish a big success to the whole team, GOODLUCK???? @KicchaSudeep @sumalathaA— Malashree Ramu (@RamuMalashree) September 22, 2018Sign in to your account
Username or Email Address


Password

 Remember Me


