ಬೆಂಗಳೂರು:  ಪ್ರ್ಯಾಕ್ಟಿಕಲ್ ಡೈಲಾಗುಗಳ ಮೂಲಕವೇ ಅಪಾರ ಅಭಿಮಾನಿ ಬಳಗ ಸೃಷ್ಟಿಸಿಕೊಂಡವರು ಉಪೇಂದ್ರ. ಅವರಿಗೆ ರಿಯಲ್ ಸ್ಟಾರ್ ಎಂಬ ಬಿರುದು ಬಂದಿರೋದು ಕೂಡಾ ಈ ಕಾರಣದಿಂದಲೇ. ಇದೀಗ ಮತ್ತೆ ಅವರು ಉಪೇಂದ್ರ ಚಿತ್ರದ ಟ್ರ್ಯಾಕಿಗೆ ಮರಳಿದರಾ? ಹೀಗೊಂದು ಪ್ರಶ್ನೆಯನ್ನು ಹುಟ್ಟು ಹಾಕಿರೋದು ಆರ್ ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರ!ಆರಂಭದಿಂದಲೂ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದ್ದ ಐ ಲವ್ ಯೂ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದರಲ್ಲಿ ಸಿಂಗಲ್ ಪೀಸಲ್ಲಿ ಪವಡಿಸಿರೋ ಉಪ್ಪಿ ಬಾಯಲ್ಲಿ ರೋಸ್ ಕಚ್ಚಿಕೊಂಡು ಪ್ರೀತಿ ಪಾಠ ಹೇಳಿದ್ದಾರೆ. ಐ ಲವ್ ಯೂ ಅಂದ್ರೇನೆಂಬುದನ್ನು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ.ಇದೆಲ್ಲವನ್ನೂ ನೋಡುತ್ತಿದ್ದರೆ ಉಪ್ಪಿ ತಮ್ಮನ್ನು ಸ್ಟಾರ್ ಆಗಿಸಿದ ಉಪೇಂದ್ರ ಚಿತ್ರದ ಟ್ರ್ಯಾಕಿಗೇ ಮರಳಿದಂತಿದೆ. ಇದುವರೆಗೂ ಪ್ರೀತಿ ಪ್ರೇಮದ ನವಿರಾದ ಭಾವಗಳ ಮೂಲಕವೇ ಗೆದ್ದಿರೋ ನಿರ್ದೇಶಕ ಆರ್. ಚಂದ್ರು ಮತ್ತು ಪ್ರೀತಿಯ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ಹೊಂದಿರೋ ಉಪೇಂದ್ರ ಒಂದಾಗಿರೋದರಿಂದ ಏನೋ ಕಮಾಲ್ ಸೃಷ್ಟಿಯಾಗೋ ನಿರೀಕ್ಷೆಯೂ ಇದೆ.ಐ ಲವ್ ಯೂ ಚಿತ್ರದ ಫಸ್ಟ್ ಲುಕ್ಕಿನಲ್ಲಿ ಆರ್. ಚಂದ್ರು ಮಾಮೂಲಿ ಟ್ರ್ಯಾಕು ಬಿಟ್ಟಿರುವ ಮತ್ತು ಉಪೇಂದ್ರ ಹಳೇ ಟ್ರ್ಯಾಕು ಹಿಡಿದಿರುವ ಸೂಚನೆ ಸ್ಪಷ್ಟವಾಗಿಯೇ ಸಿಕ್ಕಿವೆ!ರಿಯಲ್ ಸ್ಟಾರ್ @nimmaupendra ಮತ್ತು @RachitaRamDQ ಅಭಿನಯದ "ಐ ಲವ್ ಯು" ಚಿತ್ರದ ಫಸ್ಟ್ ಲುಕ್ ವೀಕ್ಷಿಸಿ ???? https://t.co/gNSYaxtaw9 #ILoveYou @rchandrumovie @aanandaaudio pic.twitter.com/6g4zDEodOS— Sandalwood Loka (@SandalwoodLoka) September 22, 2018 ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv https://www.youtube.com/watch?v=cRJuJ0qnVbk&feature=youtu.beSign in to your account
Username or Email Address


Password

 Remember Me


