ಬೆಂಗಳೂರು: ನಟ ನಿಖಿಲ್ ಕುಮಾರ್ ಅಭಿನಯಿಸುತ್ತಿರುವ ‘ಸೀತಾರಾಮ ಕಲ್ಯಾಣ’ ಚಿತ್ರ ತಾರೆಗಳಿಂದ ತುಂಬಿ ತುಳುಕುತ್ತಿದ್ದು, ಈಗ ನಿಖಿಲ್ ಅವರಿಗೆ ತಾಯಿಯ ಪಾತ್ರದಲ್ಲಿ ನಟಿಸಲು ಬಿಟೌನ್ ನಟಿ 20 ವರ್ಷಗಳ ನಂತರ ಸ್ಯಾಂಡಲ್‍ವುಡ್ ಗೆ ಎಂಟ್ರಿಯಾಗುತ್ತಿದ್ದಾರೆ.`ಮೈನೆ ಪ್ಯಾರ್ ಕಿಯಾ’ ಲಡಕಿ ಎಂದೇ ಬಾಲಿವುಡ್‍ನಲ್ಲಿ ಫೇಮಸ್ ಆಗಿರುವ ಮುದ್ದು ಮುಖದ ನಟಿ ಭಾಗ್ಯಶ್ರೀ ಅವರು ಸ್ಯಾಂಡಲ್‍ವುಡ್ ಗೆ ಬರುತ್ತಿದ್ದಾರೆ. ಈಗಾಗಲೇ `ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ರವಿಶಂಕರ್, ಸಂಪತ್ ರಾಜ್, ಮಧು, ಶರತ್ ಕುಮಾರ್ ಸೇರಿದಂತೆ ಅನೇಕ ಹೆಸರಾಂತ ತಾರೆಯರು ಅಭಿನಯಿಸಿದ್ದಾರೆ.ತಮಿಳು-ತೆಲುಗು ಭಾಷೆಯ ಒಂದೆರಡು ಚಿತ್ರಗಳಲ್ಲಿ ಅಭಿನಯಿಸಿದ್ದ ಭಾಗ್ಯಶ್ರೀ ಮದುವೆಯಾಗಿ ಸಾಂಸಾರಿಕ ಜೀವನದಲ್ಲೇ ಬ್ಯುಸಿಯಾಗಿದ್ದರು. ಆಗಾಗ ಹಿಂದಿ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕೆಲ ಚಿತ್ರಗಳಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ದೊಡ್ಡಪರದೆಯಿಂದ ಅನೇಕ ವರ್ಷಗಳ ಕಾಲ ದೂರವೇ ಇದ್ದರು. ಈಗ ಸ್ಯಾಂಡಲ್‍ವುಡ್ ಮೂಲಕ ಮತ್ತೆ ಸಿನಿಮಾರಂಗಕ್ಕೆ ಪ್ರವೇಶಿಸುತ್ತಿದ್ದಾರೆ.ಸೀತಾರಾಮ ಕಲ್ಯಾಣ ಚಿತ್ರತಂಡದ ಅಭಿಲಾಷೆಯ ಮೇರೆಗೆ ಕನ್ನಡ ಸಿನಿಮಾದಲ್ಲಿ ಮತ್ತೆ ಅಭಿನಯಿಸುವುದಕ್ಕೆ ಒಪ್ಪಿ ಬರುತ್ತಿದ್ದಾರೆ. ವಿಶೇಷ ಅಂದರೆ ನಿಖಿಲ್ ಕುಮಾರ್ ತಾಯಿಯ ಪಾತ್ರದಲ್ಲಿ ಭಾಗ್ಯಶ್ರೀ ನಟಿಸಲಿದ್ದು, ಒಂದು ಫ್ಲ್ಯಾಶ್‍ಬ್ಯಾಕ್ ಕಥೆಯಲ್ಲಿ ಭಾಗ್ಯಶ್ರೀ ಪಾತ್ರ ಬರಲಿದೆಯಂತೆ. ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲೇ ಭಾಗ್ಯಶ್ರೀ ಅಭಿನಯಿಸುವ ಭಾಗದ ಚಿತ್ರೀಕರಣ ನಡೆಯಲಿದೆ.ಭಾಗ್ಯಶ್ರೀ ಅವರು ಸಲ್ಮಾನ್ ಖಾನ್ ಜೋಡಿಯಾಗಿ ಚಿತ್ರರಂಗ ಪ್ರವೇಶಿಸಿ ನಟಿಸಿದ್ದ ಮೊದಲ ಚಿತ್ರವೇ ಭರ್ಜರಿ ಹಿಟ್ ಆಗಿತ್ತು. ಮೈನೆ ಪ್ಯಾರ್ ಕಿಯಾ ಬಳಿಕ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಮುಂದೆ ಭಾಗ್ಯಶ್ರೀ ದಕ್ಷಿಣ ಚಿತ್ರರಂಗದ ಕಡೆ ಪ್ರಯಾಣ ಬೆಳೆಸಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಜೋಡಿಯಾಗಿ `ಅಮ್ಮಾವ್ರ ಗಂಡ’ ಕನ್ನಡ ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv Sign in to your account
Username or Email Address


Password

 Remember Me


