ಮೈಸೂರು: ಜಿಲ್ಲೆಯ ಮನೆಯೊಂದಕ್ಕೆ ನಾಗರಹಾವು ನುಗ್ಗಿದ್ದು, ಮನೆಯಲ್ಲಿ ಸಾಕಿದ್ದ ನಾಯಿಯೊಂದು ಆ ಹಾವಿನ ಸುಳಿವನ್ನು ನೀಡಿರುವ ಘಟನೆ ಪಿರಿಯಾಪಟ್ಟಣದ ಕಂಪಲಾಪುರದಲ್ಲಿ ನಡೆದಿದೆ.ಹಿಂಬಾಗಿಲಿನಿಂದ ಮನೆಯೊಳಗೆ ನಾಗರಹಾವು ಬರುತ್ತಿದ್ದಂತೆ ಸಾಕಿದ ಶ್ವಾನ ರೂಬಿ ಬೊಗಳಲು ಶುರುಮಾಡಿದೆ. ಇದನ್ನು ಕಂಡ ಮನೆಯವರು ಏಕೆ ನಾಯಿ ಇಷ್ಟೊಂದು ಬೊಗಳುತ್ತಿದೆ ಎಂದು ಮನೆಯ ಒಡತಿ ನೋಡಿದ್ದಾರೆ. ಹಾವನ್ನು ನೋಡಿದ ಮನೆಯ ಒಡತಿ ಪತಿ ಗೋಪಿಗೆ ವಿಷಯ ತಿಳಿಸಿದ್ದಾರೆ. ಮನೆಯವರು ಸ್ನೇಕ್ ಗಿರೀಶ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗಿರೀಶ್ ಹಾವನ್ನು 2 ಲೀಟರ್ ವಾಟರ್ ಬಾಟಲಿನೊಳಗೆ ಹಿಡಿದು ಅದನ್ನು ಮನೆಯಿಂದ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


