ಮಂಡ್ಯ: ನಮ್ಮ ಶವಗಳನ್ನು ಕಾರ್ಪೊರೇಶನ್ ನಲ್ಲಿ ಬಿಸಾಕಿ ಅಂತ ಹೇಳಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಸುಂಕಾತಣ್ಣೂರು ಗ್ರಾಮದಲ್ಲಿ ನಡೆದಿದೆ.ನಂದೀಶ್(35), ಕೋಮಲ(28), ಚಂದನ(10), ಮೀನ(13) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾವೂ ವಿಷ ಸೇವಿಸಿ ದಂಪತಿ ಸಾವಿಗೆ ಶರಣಾಗಿದ್ದಾರೆ. ಈ ಕುಟುಂಬಕ್ಕೆ ಎರಡು ಎಕರೆ ಜಮೀನು ಹೊಂದಿದ್ದು, ಇದರಲ್ಲಿ ಕಬ್ಬು ಬೆಳೆಯುತ್ತಿದ್ದರು. ಈ ಬೆಳೆ ಬೆಳೆಯಲು ದಂಪತಿ ಸುಮಾರು 10 ಲಕ್ಷ ಬ್ಯಾಂಕ್ ಮತ್ತು ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.ಸಿಎಂ ಭೇಟಿ ಮಾಡಿದ್ದ ದಂಪತಿ:
ಸದ್ಯ ಕುಟುಂಬ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತ ಹೇಳಲಾಗುತ್ತಿದೆ. ಯಾಕಂದ್ರೆ ಮೃತ ದಂಪತಿ ಈ ಹಿಂದೆ 2 ಬಾರಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದು, ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಆದ್ರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮನನೊಂದು ದಂಪತಿ ಈ ಕೃತ್ಯ ಎಸಗಿದ್ದಾರೆ. ಆತ್ಮಹತ್ಯೆಗೂ ಮುನ್ನ ದಂಪತಿ ಡೆತ್ ನೋಟ್ ಬರೆದಿಟ್ಟು ಮನವಿ ಮಾಡಿಕೊಂಡಿದ್ದಾರೆ.ಡೆತ್ ನೋಟ್ ನಲ್ಲೇನಿದೆ?:
ಈ ಹಿಂದೆ ನಾವು ಕುಮಾರಸ್ವಾಮಿಯವರನ್ನು ಭೇಟಿಯಾಗಿ ನನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದೇನೆ. ಆದ್ರೆ ನಮ್ಮ ಸಮಸ್ಯೆ ಪರಿಹಾರವಾಗಿಲ್ಲ. ಇದೀಗ ನಾವು ಹೇಡಿತನದಿಂದ ಸಾಯ್ತಿಲ್ಲ. ಆದ್ರೆ ಬದುಕೋದಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ನಾವು ಸಾಯ್ತಾ ಇದ್ದೀವಿ. ಕಡೆಯದೊಂದು ನಮ್ಮ ಮನವಿ ಇದೆ. ನಮ್ಮ ಮೃತದೇಹಗಳನ್ನು ಯಾರೂ ಕೂಡ ಮುಟ್ಟಬಾರದು. ನಮ್ಮ ಶವಗಳನ್ನು ಕಾರ್ಪೊರೇಷನ್ ಗೆ ಬಿಸಾಕಿ ಅಂತ ದಂಪತಿ ಡೆತ್ ನೋಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 






 Advertisement 




Sign in to your account
Username or Email Address


Password

 Remember Me


